

ಬಳ್ಳಾರಿ: ಕರೊನಾ ಸೋಂಕಿಗೆ ಒಳಗಾಗಿರುವ ಆರು ಜನರ ಆರೋಗ್ಯ ಸ್ಥಿರವಾಗಿದೆ. ಒಬ್ಬರು ಗುಣಮುಖವಾಗುತ್ತಿದ್ದು, ನಿಯಮದಂತೆ ಇನ್ನೂ ಎರಡು ಬಾರಿ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿದರು. ತಬ್ಲಿಘಿ ಜಮಾತ್ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗಿದ್ದ 68 ಜನರ ಆರೋಗ್ಯ ಪರೀಕ್ಷಿಸಿದ್ದು, ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಉಳಿದ 67 ಜನರ ವರದಿ ನೆಗೆಟಿವ್ ಬಂದಿದ್ದು, ಪ್ರೋಟೊಕಾಲ್ ಪ್ರಕಾರ ಮತ್ತೆ ಪರೀಕ್ಷಿಸಲಾಗುತ್ತದೆ. ಆಗಲೂ ಅವರಲ್ಲಿ ನೆಗೆಟಿವ್ ಕಂಡು ಬಂದರೆ ಕ್ವಾರಂಟೈನ್‌ನಿಂದ ಕೈಬಿಡಲಾಗುತ್ತದೆ. ಸದ್ಯ ಶಂಕಿತರನ್ನು ಪ್ರತೇಕ ಹೋಟೆಲ್‌ಗಳಲ್ಲಿ ಇರಿಸಲಾಗಿದ್ದು, ಕೆಲವರು ಮಸಾಲೆ ಪದಾರ್ಥದ ಅಡುಗೆ ಬೇಕು ಎನ್ನುತ್ತಿದ್ದಾರೆ. ಹೀಗಾಗಿ ದಾನಿಗಳ ಸಹಕಾರದಿಂದ ಪೂರೈಸಲಾಗುತ್ತಿದೆ ಎಂದು ಡಿಸಿ ನಕುಲ್ ತಿಳಿಸಿದರು.