

ಸಿದ್ದಾಪುರ: ಬುಧವಾರ ಮಧ್ಯಾಹ್ನದಿಂದ ತಾಲೂಕಿನಲ್ಲಿ ಗಾಳಿ- ಮಳೆ ಜೋರಾಗಿದೆ. ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಮನೆಯೊಳಗಿದ್ದ ಆರು ಜನ ಅಸ್ವಸ್ಥರಾದ ಘಟನೆ ಇಲ್ಲಿಯ ಹಾರ್ಸಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಕಿಸವಲು ಗಾಳಿಜಡ್ಡಿಯಲ್ಲಿ ನಡೆದಿದೆ.
ವಿದ್ಯಾ ಚೆನ್ನಯ್ಯ, ಸುನಂದಾ ಚೆನ್ನಯ್ಯ, ಸುನೀತಾ ಚೆನ್ನಯ್ಯ, ವಿನಾಯಕ ಚೆನ್ನಯ್ಯ, ವಿಹಾನ್ ಚೆನ್ನಯ್ಯ ಹಾಗೂ ಪ್ರೇಮಾ ಚೆನ್ನಯ್ಯ ಅಸ್ವಸ್ಥರಾದವರು. ಸಿಡಿಲಿನ ಅಬ್ಬರಕ್ಕೆ ಮನೆಯ ಮೇಲ್ಛಾವಣಿಗೆ ಧಕ್ಕೆ ಆಗಿದೆ. ಮನೆಯವರಿಗೆ ವಿದ್ಯುತ್ ಶಾಕ್ ತಗುಲಿದೆ. ಹೆಂಚು ಬಿದ್ದು ಕೆಲವರಿಗೆ ಗಾಯವಾಗಿದೆ.
ಅಸ್ವಸ್ಥರನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.