

ಶಿರಸಿ: ನಗರದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ 6 ಆರೋಪಿಗಳನ್ನು ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಸ್ಲಿಂಗಲ್ಲಿಯ ಇಜಾಜ ಮಕ್ಬೂಲ್ ಶೇಖ (27), ಅಯ್ಯಪ್ಪನಗರದ ಮುಸ್ತಾಕ ಅಬ್ದುಲ ರೆಹಮಾನ ಖಾನ್ (27), ಯಲ್ಲಾಪುರ ರಸ್ತೆಯ ಸೋಂದಾ ಕ್ರಾಸ್‌ನ ಅಕ್ಬರಬಾಷಾ ಮೆಹಬೂಬ ಅಲಿ ದೊಡ್ಮನಿ (23), ರಾಜೀವನಗರದ ಆನಂದ ಹನುಮಂತ ಬೋವಿವಡ್ಡರ (21), ಬಚಗಾಂವನ ಕೃಷ್ಣ ಗಣೇಶ ಆಚಾರಿ (18) ಹಾಗೂ ಸಿದ್ದಾಪುರದ ಅಮೀನಾ ಸರ್ಕಲ್‌ನ ಜಾನ್ ಮೈಕಲ್ ರೋಡಿಗ್ರಸ್ (31) ಬಂಧಿತರು.
ನಗರದ ಯಲ್ಲಾಪುರ ರಸ್ತೆಯ ಅರಣ್ಯ ನೌಕರರ ಭವನದ ಬಳಿ ಜು. 19 ರಂದು ರಾತ್ರಿ 11.30ಕ್ಕೆ ಆರೋಪಿಗಳು ಗಾಂಜಾ ಮಾರುತ್ತಿರುವುದರ ಬಗ್ಗೆ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಪೊಲೀಸರು 10,300 ರೂ. ಮೌಲ್ಯದ 212 ಗ್ರಾಂ ಗಾಂಜಾ, ಸಾಗಾಟಕ್ಕೆ ಬಳಸಿದ 2 ಸ್ಕೂಟಿ ಮತ್ತು 5 ಮೊಬೈಲ್‌ಫೋನ್ ವಶಪಡಿಸಿಕೊಂಡಿದ್ದಾರೆ.
ಶಿರಸಿ ಡಿಎಸ್ಪಿ ಗೀತಾ ಪಾಟೀಲ, ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ಪಿಎಸ್‌ಐ ರತ್ನಾ ಕುರಿ, ರಾಜಕುಮಾರ್ ಉಕ್ಕಲಿ ನೇತೃತ್ವದ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.