

ಗುಂಡ್ಲುಪೇಟೆ: ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರು ಜೀವಂತ ಆಮೆಗಳು ಹಾಗೂ ಶ್ರೀಗಂಧದ ಮರದ ತುಂಡುಗಳನ್ನು ಸಾಗಣೆ ಮಾಡಿತ್ತಿದ್ದ ತಮಿಳುನಾಡು ಮೂಲದ ಆರೋಪಿಯನ್ನು ಬಂಧಿಸಿದ್ದಾರೆ.
ಮದ್ದೂರು ವಲಯದ ಅರಣ್ಯ ಸಿಬ್ಬಂದಿ ಶುಕ್ರವಾರ ಸಂಜೆ ಗಸ್ತು ನಡೆಸುವಾಗ ಹೊಂಗಳ್ಳಿ ಬೀಟ್ ಸಮೀಪ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕೃಷ್ಣಗಿರಿ ಮೂಲದ ಕುಮಾರ್(27) ಎಂಬಾತನ ಬಳಿ ಇದ್ದ ಆರು ಆಮೆಗಳು ಹಾಗೂ 72 ಕೆಜಿ ತೂಕದ 3 ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಗುಂಡ್ಲುಪೇಟೆ ಉಪವಿಭಾಗ ಎಸಿಎಫ್ ಸುರೇಶ್ ಹಾಗೂ ಮದ್ದೂರು ವಲಯದ ಪ್ರಭಾರ ಆರ್‌ಎಫ್‌ಒ ಎನ್.ಮಹದೇವ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.