

ಮಂಡ್ಯ: ನಗರದ ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಬಿ.ಟಿ.ನಾಗರಾಜ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ 6 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರಾದ ಪಿ.ಎಂ.ರಾಘವೇಂದ್ರ, ಹೊಸಹಳ್ಳಿ ನಾಗೇಶ್, ಪ್ರಮೀಳಾ ಮಹೇಶ್, ಎನ್.ಶಶಿಧರ್, ಎಚ್.ಟಿ.ಜನಾರ್ದನಸ್ವಾಮಿ, ಬಿ.ಜೆ.ಸೋಮಶೇಖರ್ ಅವರನ್ನು ಅಭಿನಂದಿಸಲಾಯಿತು. ಬಿಜೆಪಿ ನಗರಾಧ್ಯಕ್ಷ ವಸಂತ್‌ಕುಮಾರ್, ಜೆಡಿಎಸ್ ಮುಖಂಡ ಸುರೇಶ್, ಅನಿಲ್, ಮಹೇಶ್ ಇತರರಿದ್ದರು.