ರೌಡಿಶೀಟರ್‌ ರಾಹುಲ್‌ ಹತ್ಯೆ ಪ್ರಕರಣ; ಆರು ಮಂದಿ ಆರೋಪಿಗಳ ಬಂಧನ

IMG-20220509-WA0008
Published on

ಮಂಗಳೂರು: ಎಮ್ಮೆಕೆರೆ ಮೈದಾನ ಬಳಿ ಏ.28ರಂದು ನಡೆದ ರೌಡಿ ಶೀಟರ್ ಹೂಯ್ಗೆ ಬಜಾರ್ ನಿವಾಸಿ ರಾಹುಲ್ ತಿಂಗಳಾಯ ಯಾನೇ ಕಕ್ಕೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಎಮ್ಮೆಕೆರೆ ನಿವಾಸಿ ಮಹೇಂದ್ರ ಶೆಟ್ಟಿ (27), ಅಕ್ಷಯ್‌ ಕುಮಾರ್‌ (25), ಸುಶಿನ್‌ (20), ದಿಲ್ಲೇಶ್‌ ಬಂಗೇರ (21) ಮತ್ತು ಕೃತ್ಯಕ್ಕೆ ಸಹಕರಿಸಿದ ಸುಭಂ (26), ವಿಷ್ಣು ಪಿ. (26) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಒಟ್ಟು 13 ಮಂದಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದ್ದು, ಇತರ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಲಾದ 3 ತಲವಾರು, 4 ಕತ್ತು, 3 ಚೂರಿ, ಮೂರು ದ್ವಿಚಕ್ರ ವಾಹನ ಮತ್ತು 5 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎಂದು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net