ಶಿವಪ್ಪತಾತನ ಉಚ್ಚಾಯ ಸಂಭ್ರಮ

Kurgodu jatre
ಹಂದಿಹಾಳು ಗ್ರಾಮದಲ್ಲಿ ಬುಧವಾರ ಶಿವಪ್ಪ ತಾತನ ಉಚ್ಚಾಯ ಎಳೆಯಲಾಯಿತು.
Published on

ಕುರುಗೋಡು: ಸಮೀಪದ ಹಂದಿಹಾಳು ಗ್ರಾಮದಲ್ಲಿ ಪವಾಡಪುರುಷ ಶಿವಪ್ಪತಾತನ ಉಚ್ಚಾಯ ಬುಧವಾರ ನೂರಾರು ಭಕ್ತರ ಮಧ್ಯೆ ಸಡಗರ, ಸಂಭ್ರಮದಿಂದ ಜರುಗಿತು.

ಮಠದಲ್ಲಿ ಬೆಳಗ್ಗೆಯಿಂದಲೇ ಶಿವಪ್ಪತಾತನ ಕರ್ತೃಗದ್ದುಗೆಗೆ ರುದ್ರಾಭಿಷೇಕ, ಹೋಮ, ಹವನ, ಎಲೆಪೂಜೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಠದ ಪೀಠಾಧಿಪತಿ ಆದಿಕೇಶವ ಶ್ರೀಗಳು ಉಚ್ಚಾಯಕ್ಕೆ ಚಾಲನೆ ನೀಡಿ, ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಹಾರೈಸಿದರು. ಭಕ್ತರು ಜಯಘೋಷ ಕೂಗುತ್ತಾ ಪಾದಗಟ್ಟೆವರೆಗೆ ಉಚ್ಚಾಯ ಎಳೆದರು.

ಉಚ್ಚಾಯ ಉದ್ದಕ್ಕೂ ಯುವಕರ ಡೊಳ್ಳುಕುಣಿತ ಗಮನ ಸೆಳೆಯಿತು. ಮಠದಲ್ಲಿ ರಾತ್ರಿ ವೇದಾಂತ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net