ಶಿವಾನಂದ ಉದಪುಡಿ ಅಧ್ಯಕ್ಷ, ಗುರುರಾಜ ಉದಪುಡಿ ಉಪಾಧ್ಯಕ್ಷ

Sivananda Udapudi is the President, Gururaj Udapudi is the Vice President
ಲೋಕಾಪುರ ಲೋಕೇಶ್ವರ ಕೋ ಆಪ್ ಕ್ರೆಡಿಟ್ ಬ್ಯಾಂಕ್ ಅಧ್ಯಕ್ಷ ಶಿವಾನಂದ ಉದಪುಡಿ ಹಾಗೂ ಉಪಾಧ್ಯಕ್ಷ ಗುರುರಾಜ ಉದಪುಡಿ ಅವರನ್ನು ಸನ್ಮಾನಿಸಲಾಯಿತು. ವಿಠ್ಠಲಗೌಡ ಪಾಟೀಲ, ಬಸಪ್ಪಗೌಡ ಚೌಧರಿ, ಮಹಾಂತೇಶ ಬಟಕುರ್ಕಿ, ಸಚೀನ್ ಪಾಟೀಲ ಇತರರಿದ್ದರು.
Published on

ಲೋಕಾಪುರ: ಪಟ್ಟಣದ ಪ್ರತಿಷ್ಠಿತ ಲೋಕೇಶ್ವರ ಕೋ ಆಪ್ ಕ್ರೆಡಿಟ್ ಬ್ಯಾಂಕ್‌ನ 2023-24ನೇ ಸಾಲಿನ ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಅಧ್ಯಕ್ಷರಾಗಿ ಹಾಗೂ ಬ್ಯಾಂಕ್ ಸದಸ್ಯ ಗುರುರಾಜ ಉದಪುಡಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ, ಸಹಕಾರ ಸಂಘದ ಸಹಾಯಕ ನಿಬಂಧಕ ಎಸ್.ಆರ್. ಬಾಡಗಿ ತಿಳಿಸಿದ್ದಾರೆ.

ನೂತನ ಅಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, 25 ವರ್ಷ ಸಂಸ್ಥೆಯ ರೂವಾರಿ ದಿ. ಬಸವರಾಜ ಉದಪುಡಿ ಅವರ ಮಾರ್ಗದರ್ಶನದಲ್ಲಿ ನಡೆದಿದ್ದೇವೆ. ಎಲ್ಲ ನಿರ್ದೇಶಕರು ನನ್ನ ಮೇಲೆ ವಿಶ್ವಾಸವಿಟ್ಟು ಬ್ಯಾಂಕ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಬ್ಯಾಂಕಿನ ವ್ಯವಹಾರ ಗಟ್ಟಿಗೊಳಿಸಲು ಹಾಗೂ ಹೆಚ್ಚಿನ ರೈತರು, ವ್ಯಾಪಾರಸ್ಥರು, ಸಾರ್ವಜನಿಕರಿಗೆ ಸಹಾಯ ಒದಗಿಸಲು ನಮ್ಮ ಬ್ಯಾಂಕ್ ಸದಾ ಸಿದ್ಧವಾಗಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಗುರುರಾಜ ಉದಪುಡಿ ಮಾತನಾಡಿ, ನನಗೆ ನೀಡಿದ ಜವಾಬ್ದಾರಿ ಇನ್ನೂ ಹೆಚ್ಚು ಕೆಲಸ ಮಾಡಲು ಪ್ರೇರೇಪಿಸಿದೆ ಎಂದರು.

ನಿರ್ದೇಶಕರಾದ ವಿಠ್ಠಲಗೌಡ ಪಾಟೀಲ, ಬಸಪ್ಪಗೌಡ ಚೌಧರಿ, ಮಹಾಂತೇಶ ಬಟಕುರ್ಕಿ, ಸಚೀನ ಪಾಟೀಲ, ಶಿವಯೋಗಿ ಗಂಗಣ್ಣವರ, ಚನ್ನಬಸಪ್ಪ ನರಗುಂದ, ಬಸಪ್ರಭು ಕಾತರಕಿ, ಸರ್ವಮಂಗಳಾ ಉದಪುಡಿ, ಚಂದ್ರಕಲಾ ಅಂಗಡಿ, ಬಸಮ್ಮ ಹೊಸಮನಿ, ದುರ್ಗಪ್ಪ ಗಸ್ತಿ ಹಾಗೂ ಮುಖ್ಯಕಾರ್ಯನಿರ್ವಾಹಕ ಚಂದ್ರಶೇಖರ ಕೋಲ್ಹಾರ ಬ್ಯಾಂಕ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net