ಮಲ್ಲನಮೂಲೆ ಮಠದಲ್ಲಿ ಶಿವಕುಮಾರ ಶ್ರೀ ಸ್ಮರಣೆ

Oplus_131072
ಪಟ್ಟಣದ ಸಮೀಪ ಇರುವ ಮಲ್ಲನಮೂಲೆ ಮಠದಲ್ಲಿ ಸಿದ್ಧಗಂಗಾ ಶ್ರೀಗಳ ಜನ್ಮದಿನ ಹಾಗೂ ಬಸವ ಜಯಂತಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಶ್ರೀ ಚನ್ನಬಸವ ಸ್ವಾಮೀಜಿ, ಸಿಂಧುವಳ್ಳಿ ಕೆಂಪಣ್ಣ, ದೇವನೂರು ಶಿವಪ್ಪ ದೇವರು,ಶಿವಕುಮಾರ್, ಎಸ್.ಕೆ.ಚನ್ನಪ್ಪ ಇತರರು ಇದ್ದರು.
Published on

ನಂಜನಗೂಡು: ಸಮೀಪದ ಮಲ್ಲನ ಮೂಲೆ ಕ್ಷೇತ್ರದಲ್ಲಿ ಮಂಗಳವಾರ ಸಿದ್ಧಗಂಗಾ ಶ್ರೀಗಳ 118ನೇ ಜನ್ಮದಿನ ಹಾಗೂ ಬಸವ ಜಯಂತಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.

ಮಲ್ಲನ ಮೂಲೆ ಮಠಾಧ್ಯಕ್ಷ ಶ್ರೀ ಚನ್ನಬಸವ ಸ್ವಾಮೀಜಿ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಾಲೂಕು ವೀರಶೈವ ಘಟಕದ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಮಾತನಾಡಿ, 2025ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಇಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಬಸವ ಜಯಂತಿ ಕಾರ್ಯಕ್ರಮವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಲಾಗುತ್ತಿದೆ. ಸುತ್ತೂರು ಶ್ರೀೀಗಳು ಗೊತ್ತುಪಡಿಸಿದ ದಿನಾಂಕ ಅವರ ನಿರ್ದೇಶನದಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಜಯಂತಿ ಕಾರ್ಯಕ್ರಮಕ್ಕೆ ಸಮಾಜದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಚಿವ ಈಶ್ವರ್ ಖಂಡ್ರೆ, ಶಂಕರ್ ಬಿದರಿ ಅವರನ್ನು ಆಹ್ವಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬಸವ ಜಯಂತಿ ಮೆರವಣಿಗೆ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಕಲಾಮಂದಿರದಿಂದ ಹೊರಟು, ಆರ್‌ಪಿ ರಸ್ತೆಯ ಮೂಲಕ ವಿದ್ಯಾವರ್ಧಕ ಕಾಲೇಜು ಆವರಣದಲ್ಲಿ ಕೊನೆಗೊಳ್ಳುತ್ತದೆ. ಸಮಾಜದ ಸುಮಾರು 20 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಬಸವ ಜಯಂತಿಯ ಹಿಂದಿನ ದಿನ ಹಾಗೂ ಬಸವ ಜಯಂತಿ ದಿನದಂದು ಹಲವು ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿದೆ. ಜಯಂತಿಗೆ ಆಗಮಿಸುವ ಎಲ್ಲರಿಗೂ ದಾಸೋಹ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಶ್ರೀ ಚನ್ನಬಸವ ಸ್ವಾಮೀಜಿ, ಮುಖಂಡರಾದ ದೇವನೂರು ಶಿವಪ್ಪ ದೇವರು, ಶಿವಕುಮಾರ್, ಎಸ್.ಕೆ.ಚನ್ನಪ್ಪ, ಹುಲ್ಲಳ್ಳಿ ಮಾದಪ್ಪ, ಮಂಜುನಾಥ್, ಕೋಮಲಾ ಸಿದ್ಧಲಿಂಗಸ್ವಾಮಿ, ರಾಜೇಂದ್ರ, ಮಹದೇವಸ್ವಾಮಿ, ಅನಸೂಯ ಗಣೇಶ್, ಶಶಿಕಲಾ ಗಿರೀಶ್, ಗೀತಾ ರೇವಣ್ಣ, ಎನ್.ಸಿ.ಬಸವಣ್ಣ, ಹುಳಿಮಾವು ಪರಶಿವಮೂರ್ತಿ, ಸುಧಾ, ಹೆಜ್ಜಿಗೆ ನಾಗೇಂದ್ರ, ಮಡಹಳ್ಳಿ ನಟರಾಜು, ಮಂಜೇಶ್ ಕುಮಾರ್, ಹಾಡ್ಯ ಮಹದೇವಸ್ವಾಮಿ, ಚಿಗುರು ನಂಜುಂಡಸ್ವಾಮಿ, ಮಡುವಿನಹಳ್ಳಿ ಮಹೇಶ್ ಗುರು ಸೇರಿದಂತೆ ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net