

ನುಗ್ಗೇಹಳ್ಳಿ: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎನ್.ಆರ್. ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ವಿಠಲ್ಕುಮಾರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಗ್ರಾಮದ 3ನೇ ಬ್ಲಾಕ್ ಸದಸ್ಯ ಶಿವಕುಮಾರ್ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಹರೀಶ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಬೀದಿ ದೀಪಗಳ ವ್ಯವಸ್ಥೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಿಗೆ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಸಲಹೆ ಪಡೆದು ಆದ್ಯತೆ ನೀಡುವುದಾಗಿ ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷೆ ರಾಧಾ ಹರೀಶ್, ಕನ್ನಡ ಸಾಹಿತ್ಯ ಪರಿಷತ್‌ನ ಹೋಬಳಿ ಅಧ್ಯಕ್ಷ ದೊರೆಸ್ವಾಮಿ, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎಂ.ನಟರಾಜ್, ಗ್ರಾಪಂ ಸದಸ್ಯರಾದ ವಿಜಯಲಕ್ಷ್ಮೀ ಜಗದೀಶ್, ಶಬೀನತಾಜ್ ಮೊಹಮ್ಮದ್ ಜಾವೀದ್, ಎನ್.ಎಸ್.ಮಂಜುನಾಥ್, ಹೊನ್ನೇಗೌಡ, ನಟರಾಜ್, ಮಂಜುಳಾ ಗೋಪಾಲ್, ದ್ರಾಕ್ಷಾಯಿಣಿ ಯಲ್ಲಪ್ಪ, ಸಬೀನಾ ತಾಜ್, ಸಾಧಿಕ್ ಪಾಷ, ಮಂಜು, ಕಿರಣ್ ಗವಿರಂಗಯ್ಯ, ಗಾಸ್ ರಾಜು, ರೇಷ್ಮಾ ಅಲ್ಲಾಭಕ್ಷಿ, ರಮ್ಯಾ ಲೋಕೇಶ್, ಸವಿತಾ ಯೋಗೇಶ್, ಮಲ್ಲಮ್ಮ ಕಾಂತರಾಜ್ ಇತರರು ಹಾಜರಿದ್ದರು.