ಮರಡಿರಂಗಪ್ಪನ ಕಳಸಾರೋಹಣ 20, 21ಕ್ಕೆ

dj hlk shivganga
Published on

ಹೊಳಲ್ಕೆರೆ: ತಾಲೂಕಿನ ಶಿವಗಂಗಾ ಗ್ರಾಮದಲ್ಲಿ ಮರಡಿ ರಂಗನಾಥಸ್ವಾಮಿ ದೇವಾಲಯದ ಶಿಖರ ಕಳಸಾರೋಹಣ ಮತ್ತು ನವಗ್ರಹ ವಿಗ್ರಹಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಆ.20, 21ಕ್ಕೆ ನಡೆಯಲಿದೆ.

ಮೊದಲ ದಿನವಾದ ಭಾನುವಾರ ಬೆಳಗ್ಗೆ 8 ಗಂಟೆಗೆ ಗಣಪತಿ ಆರಾಧನೆ, ವಾಸುದೇವ ಪುಣ್ಯಹಃ, ರಕ್ಷಾ ಬಂಧನ, ಧ್ವಜಾರೋಹಣ, ನವ ಕಳಸ ಸ್ಥಾಪನೆ, ಸಪ್ತ ಋಷಿಗಳ ಆರಾಧನೆ ನಡೆಯಲಿದೆ.

ಸಂಜೆ 6ಕ್ಕೆ ವಾಸ್ತು ಶಾಂತಿ ಹೋಮ, ರಾಕ್ಷೋಭ್ನ ಹೋಮ, ಗಣ ಹೋಮ, ನವಗ್ರಹ ಹೋಮಗಳು ನೆರವೇರಲಿವೆ.

ಸೋಮವಾರ ಬೆಳಗ್ಗೆ 4.15 ರಿಂದ 5.21ರ ಅವಧಿಯಲ್ಲಿ ನವಗ್ರಹ ವಿಗ್ರಹ ಪ್ರತಿಷ್ಠಾಪನೆ, ರಂಗನಾಥಸ್ವಾಮಿ ಮೂಲ ಮಂತ್ರ ಪೂರಕ, ಪುರುಷೋತ್ತಮ ಹಾಗೂ ಸುದರ್ಶನ ಹೋಮ, ಬೆಳಗ್ಗೆ 11.15 ರಿಂದ 12.05 ರವರೆಗೆ ಗಂಗಾಪೂಜೆ, ಕುಂಭಾಭಿಷೇಕ, ಕಳಸಾರೋಹಣ, ಅಷ್ಟಾವಧಾನ ಸೇವೆ ಸೇರಿ ಇತರ ಧಾರ್ಮಿಕ ಕಾರ್ಯಗಳು ನಡೆಯಲಿವೆ. ನಂತರ ಪ್ರಸಾದ ಸೇವೆ ಇರುತ್ತದೆ.

ಭದ್ರಾವತಿ ನ್ಯೂ ಕಾಲನಿಯ ರಾಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಾಮಾನುಜ ಅಯ್ಯಂಗಾರ್ ಮತ್ತು ಸಮೂಹ ಧಾರ್ಮಿಕ ಕಾರ್ಯ ನಡೆಸಿಕೊಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net