ಗಂಗಾವಳಿಯಲ್ಲಿ ಶಿವಗಂಗಾ ವಿವಾಹ ನಿಶ್ಚಿತಾರ್ಥ

god Meager engagement.
Published on

ಗೋಕರ್ಣ:ಗಂಗಾಷ್ಟಮಿ ನಿಮಿತ್ತ ಭಾನುವಾರ ಪ್ರಾತಃಕಾಲದಲ್ಲಿ ಗಂಗಾವಳಿಯ ಶ್ರೀಗಂಗಾಮಾತಾ ಮಂದಿರದಲ್ಲಿ ಶ್ರೀಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ ವಿಧ್ಯುಕ್ತವಾಗಿ ಸಂಭ್ರಮದಿಂದ ನೆರವೇರಿತು.ಶನಿವಾರ ರಾತ್ರಿ ಗೋಕರ್ಣದಿಂದ ಮೆರವಣಿಗೆಯಲ್ಲಿ ಆಗಮಿಸಿದ ಉತ್ಸವ ಪ್ರಾತಃಕಾಲದಲ್ಲಿ ಗಂಗಾವಳಿ ನದಿಯಲ್ಲಿ ಪುಣ್ಯ ಸ್ನಾನ ಕೈಗೊಂಡು ಶ್ರೀಗಂಗಾಮಾತಾ ಮಂದಿರಕ್ಕೆ ಆಗಮಿಸಿತು.ಅಲ್ಲಿ ಪ್ರಧಾನ ಅರ್ಚಕ ವೇ.ಅಮೃತೇಶ ಹಿರೇ ನೇತೃತ್ವದಲ್ಲಿ ವೈದಿಕ ಉಪಾಧಿವಂತರ ಸಹಯೋಗದಲ್ಲಿ ನಿಶ್ಚಿತಾರ್ಥ ಮತ್ತು ತಾಂಬೂಲ ವಿನಿಮಯ ವಿಧಿಗಳು ಸಂಪನ್ನವಾದವು.ಉತ್ಸವದ ಹಿನ್ನೆಲೆಯಲ್ಲಿ ಶ್ರೀಗಂಗಾಮಾತಾ ಮಂದಿರಕ್ಕೆ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಮಾಡಿ ಸಂಪೂರ್ಣ ಮಂದಿರ ಪರಿಸರವನ್ನು ವಿವಿಧ ಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು.ಶನಿವಾರ ರಾತ್ರಿಯಿಂದ ಭಾನುವಾರ ಸಂಜೆಯ ತನಕ ವಿಜೃಂಭಣೆಯಿಂದ ನಡೆದ ಜಾತ್ರಾ ಉತ್ಸವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ಪಾಲ್ಗೊಂಡರು. ವಿರಾಟ ಹಿಂದು ಯುವಕ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಿಮಿತ್ತ ಯಕ್ಷಗಾನ ವೈಭವ,ಸಂಗೀತ ರಸಸಂಜೆ ಮತ್ತು ಗಂಗಾರತಿ ಏರ್ಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net