ಬಂಜಾರಾ ಸಮುದಾಯದಿಂದ ‘ಸಿತ್ಲಾ ಹಬ್ಬ’

gls 2-1 sitala habba
ಜಿಎಲ್‌ಎಸ್ 2-1ಎ, ಬಿ: ಗೊಳಸಂಗಿ ಸಮೀಪದ ತೆಲಗಿ ತಾಂಡಾದಲ್ಲಿ ಬಂಜಾರ ಸಮುದಾಯದ ವತಿಯಿಂದ ಸಿತ್ಲಾ ಹಬ್ಬ ಆಚರಿಸಲಾಯಿತು. ಹಿರಿಯ ಪತ್ರಕರ್ತ ಅಶೋಕ ರಾಠೋಡ, ವೀರೇಶ ಮೇಟಿ, ಮೋಹನ ನಾಯಕ, ಬಾಬು ಕಾರಬಾರಿ ಇತರರಿದ್ದರು.
Published on

ಗೊಳಸಂಗಿ: ಸಮೀಪದ ತೆಲಗಿ ಗ್ರಾಮದ ಲಂಬಾಣಿ ತಾಂಡಾದ ಬಂಜಾರ ಸಮಾಜದವರು ತಮ್ಮ ಕುಟುಂಬದವರು ಮಂಗಳವಾರ ರಾತ್ರಿ ಸಿತ್ಲಾ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು.

ಏನಿದು ಸಿತ್ಲಾ ಹಬ್ಬ..?: ತಲೆ ತಲಾಂತರದಿಂದ ಲಂಬಾಣಿ ಜನಾಂಗ ಹೊಟ್ಟೆ ಪಾಡಿಗಾಗಿ ಕೂಲಿಯನ್ನರಸಿ ದೂರದ ಗೋವಾ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಗೆ ಗುಳೆ ಹೋಗುವುದು ವಾಡಿಕೆ. ಹೀಗೆ ಹೋಗುವಾಗ ಶಾಲೆ ಕಲಿಯುವ ಮಕ್ಕಳು, ವಯೋವೃದ್ಧ ತಂದೆ-ತಾಯಂದಿರನ್ನು ತಾಂಡಾದಲ್ಲೇ ಬಿಟ್ಟು ಹೋಗುತ್ತಾರೆ. ಹೀಗೆ ತಾವು ದೂರದ ಊರಿಗೆ ದುಡಿಮೆಗೆಂದು ಹೋದಾಗ ತಮ್ಮನ್ನೇ ನಂಬಿದ ಕುಟುಂಬದ ಸದಸ್ಯರಿಗೆ ಯಾವುದೇ ರೋಗ ರುಜಿನ ಬಾರದಿರಲೆಂದು ಏಳು ಮಕ್ಕಳ ತಾಯಿಯ ಪ್ರತಿರೂಪವಾದ ‘ಸಾತಿಯಾಡಿ’ ದೇವಿ ಪೂಜಿಸುವುದೇ ಸಿತ್ಲಾ ಹಬ್ಬದ ವೈಶಿಷ್ಟೃ. ರೂಢಿಯಲ್ಲಿ ಈ ಹಬ್ಬವನ್ನು ಕೋಳಿ ಹಬ್ಬವೆಂದು ಕರೆಯಲಾಗುತ್ತದೆ.

ಏತನ್ಮಧ್ಯೆ ತೆಲಗಿ ತಾಂಡಾದ ಬಂಜಾರ ಸಮಾಜ ಬಾಂಧವರು ಮಂಗಳವಾರ ರಾತ್ರಿ ‘ಸಾತಿಯಾಡಿ’ ದೇವಸ್ಥಾನಕ್ಕೆ ಸಾಮೂಹಿಕವಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿ ನೈವೇಧ್ಯ ಅರ್ಪಿಸುವರು. ಈ ವೇಳೆ ಪ್ರಮುಖರಾದ ಬಾಬು ಕಾರಬಾರಿ, ಹಿರಿಯ ಪತ್ರಕರ್ತರಾದ ಅಶೋಕ ರಾಠೋಡ, ವೀರೇಶ ಮೇಟಿ, ಮೋಹನ ನಾಯಕ, ಶಂಕರ ಲಮಾಣಿ, ಪುಂಡಲೀಕ ಜಾಧವ, ಮೋತಿರಾಮ ಲಮಾಣಿ, ರಾಮು ಚವ್ಹಾಣ, ಮುಂಡಲೀಕ ಲಮಾಣಿ, ಮಂಗಲಪ್ಪ ಲಮಾಣಿ, ರೇಣುಕಾ ರಾಠೋಡ, ಸೀತಾ ಚವ್ಹಾಣ, ಶೈಲಾ ರಾಠೋಡ, ಕಸ್ತೂರಿ ಲಮಾಣಿ, ತುಳಸಿ ರಾಠೋಡ, ಲಲ್ಲು ಚವ್ಹಾಣ, ಸೇವಿಬಾಯಿ ಲಮಾಣಿ, ಸಾಲಿಬಾಯಿ ನಾಯಕ ಮತ್ತಿತರರಿದ್ದರು.

ಆ ಬಳಿಕ ತಮ್ಮ ಮನೆಗಳಲ್ಲಿ ಬಂಧು-ಮಿತ್ರರೊಂದಿಗೆ ಕೋಳಿ ಮಾಂಸದ ಊಟ ಮಾಡಿ ಲಂಬಾಣಿ ಸಾಂಪ್ರದಾಯಕ ಹಾಡುಗಳನ್ನು ಹಾಡುತ್ತ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net