ತ್ಯಾಜ್ಯ ವಿಲೇವಾರಿಗೆ ಸ್ಥಳ ಪರಿಶೀಲನೆ

02Kush01
ಕೂಡುಮಂಗಳೂರಿನಲ್ಲಿ ಘನ ಮತ್ತು ದ್ರವ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗಾಗಿ ಕ್ರಿಯಾ ಯೋಜನೆಯನ್ನು ತಯಾರಿಸುವ ಸಲವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಸಂತೋಷ್, ಪೆಮ್ಮಯ್ಯ ಮತ್ತು ಹರ್ಷಿತಾ ಸ್ಥಳ ಪರಿಶೀಲಿಸಿದರು.
Published on

ಕುಶಾಲನಗರ: ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆ ಅಡಿ ಕಾವೇರಿ ನದಿ ಪಾತ್ರದ ಗ್ರಾಮ ಪಂಚಾಯಿತಿ ಕೂಡುಮಂಗಳೂರಿನಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗಾಗಿ ಕ್ರಿಯಾ ಯೋಜನೆಯನ್ನು ತಯಾರಿಸುವ ಸಲವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಪಿಡಿಒ ಸಂತೋಷ್, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕರಾದ ಪೆಮೈಯ್ಯ ಮತ್ತು ಹರ್ಷಿತಾ ಅವರು ಬಸನತ್ತೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಸಮೀಪ, ಕೂಡುಮಂಗಳೂರು ಬಸವೇಶ್ವರ ದೇವಸ್ಥಾನ ಹತ್ತಿರ, ಕೂಡ್ಲೂರು ಕೈಗಾರಿಕಾ ಪ್ರದೇಶ ಸಿಪಿ ಕಾಫಿ ವರ್ಕ್ಸ್ ಪಕ್ಕದಲ್ಲಿ ಹಾಗೂ ಕೂಡ್ಲೂರು ಹೊಳೆ ಮಲ್ಲಪ್ಪ ದೇವಸ್ಥಾನ ಮುಂಭಾಗದ ಸ್ಥಳಗಳಿಗೆ ಶನಿವಾರ ಭೇಟಿ ನೀಡಿ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net