ಸಿತಾರರತ್ನ ರಹಿಮತ ಖಾನ್‌ರ ಪುಣ್ಯತಿಥಿ, ಸಂಗೀತೋತ್ಸವ

28 Dwd 1 Rahimat Khan - Copy
Published on

ಧಾರವಾಡ: ಪ್ರತಿಷ್ಠಿತ ಧಾರವಾಡ ಘರಾಣೆಯ ಸ್ಥಾಪಕ, ಸಿತಾರರತ್ನ ರಹಿಮತ ಖಾನ್‌ರ 69ನೇ ಪುಣ್ಯತಿಥಿ ಅಂಗವಾಗಿ ಸಿತಾರರತ್ನ ಸಮಿತಿಯು ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಡಿ. 1, 2 ಮತ್ತು 3ರಂದು ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ದಲ್ಲಿ ದೇಶದ ಖ್ಯಾತ ಕಲಾವಿದರು ಹಾಗೂ ಯುವ ಪ್ರತಿಭೆಗಳಿಂದ ಗಾಯನ-ವಾದನಗಳ ನಿನಾದ ರಿಂಗಣಿಸಲಿದೆ. 1ರ0ದು ಸಂಜೆ 5.30ಕ್ಕೆ ಪ್ರಾರಂಭಗೊಳ್ಳುವ ಕಾಂiÀiðಕ್ರಮದಲ್ಲಿ ನಾಡಿನ ಯುವ ಸಿತಾರ ವಾದಕ ಮಂಗಳೂರಿನ ಅಂಕುಶ ನಾಯಕ ಅವರ ಸಿತಾರ ತಂತುಗಳ ಝೇಂಕಾರ ಮೊಳಗಲಿದೆ. ನಂತರ ವಿದ್ವತ್ಪೂರ್ಣ ಗಾಯಕ ಪಂ. ಗಣಪತಿ ಭಟ್ಟ ಹಾಸಣಗಿ ಅವರಿಂದ ಗಾನಸುಧೆ ಹರಿದುಬರಲಿದೆ. 2ರಂದು ಸಂಜೆ ೫.೩೦ಕ್ಕೆ ಉಸ್ತಾದ್ ಬಾಲೇಖಾನ್‌ರ ಮೊಮ್ಮಗ ಹಾರಿಸ್‌ಖಾನ್‌ರಿಂದ ಸಿತಾರ ನಿನಾದ ಹೊರಹೊಮ್ಮಲಿದೆ. ನಂತರ ನವದೆಹಲಿಯ ಉಸ್ತಾದ್ ಫರೀದ್ ಹಸನ್‌ಖಾನ್ ಅವರ ಗಾಯನ ಮೂಡಿಬರಲಿದೆ. 3ರಂದು ಸಂಜೆ 5.30ಕ್ಕೆ ನವದೆಹಲಿಯ ಪಂ. ಆಶಿಶ್ ಸೇನ್‌ಗುಪ್ತಾ ಅವರಿಂದ ತಬಲಾ ಸೋಲೊ ಪ್ರಸ್ತುತಗೊಳ್ಳಲಿದೆ. ನಂತರ ಬೆಂಗಳೂರಿನ ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ ಅವರ ಗಾನಸುಧೆ ಹರಿದುಬರಲಿದೆ. ಧಾರವಾಡದ ಪಂ. ಬಿ.ಎಸ್. ಮಠ ಹಾಗೂ ವಿದುಷಿ ಅಕ್ಕಮಹಾದೇವಿ ಮಠ ದಂಪತಿಯಿAದ ವಯೋಲಿನ್ ಜುಗಲ್‌ಬಂದಿಯ ನಿನಾದದೊಂದಿಗೆ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ.
ಪಂ. ಓಂಕಾರ ಗುಲ್ವಾಡಿ, ಮಯಾಂಕ ಬೇಡೆಕರ, ಉಸ್ತಾದ್ ನಿಸ್ಸಾರ ಅಹ್ಮದ್, ಮಲ್ಲೇಶ ಹೂಗಾರ (ತಬಲಾ) ಹಾಗೂ ಗುರುಪ್ರಸಾದ ಹೆಗಡೆ, ಸತೀಶ ಭಟ್ಟ ಹೆಗ್ಗಾರ (ಸಂವಾದಿನಿ), ಶಂಕರ ಕಬಾಡಿ (ವಯೋಲಿನ್ ಲೆಹ್ರಾ) ಸಹ ಕಲಾವಿದರಾಗಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net