ಸೀತಾರಾಮ ಪಟ್ಟಾಭಿಷೇಕ ಸಂಭ್ರಮ

nrp pooja
ಎನ್.ಆರ್.ಪುರದ ಅಗ್ರಹಾರ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಸೀತಾರಾಮ ಪಟ್ಟಾಭಿಷೇಕ ನಡೆಯಿತು.
Published on

ಎನ್.ಆರ್.ಪುರ: ಅಗ್ರಹಾರದ ಮಹೇಶ್ವರ ಸಭಾಭವನದಲ್ಲಿ ಶ್ರೀರಾಮ ಸೇವಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ರಾಮೋತ್ಸವದಲ್ಲಿ ಸೀತಾಕಲ್ಯಾಣ, ಪಟ್ಟಾಭಿಷೇಕ ಕಾರ್ಯಕ್ರಮಗಳು ಸಂಪ್ರದಾಯದಂತೆ ಭಾನುವಾರ ಹಾಗೂ ಮಂಗಳವಾರ ನಡೆದವು. ಭಾನುವಾರ ಸಂಜೆ ಶ್ರೀ ಸೀತಾಕಲ್ಯಾಣ ನಡೆಯಿತು.

ಜನಕ ಮಹಾರಾಜ ದಂಪತಿಯಾಗಿ ಬೆಂಗಳೂರಿನ ಲಲಿತಾ ಹಾಗೂ ಜನಾರ್ದನ ಭಟ್ ಮತ್ತು ದಶರಥ ಮಹಾರಾಜ ದಂಪತಿಯಾಗಿ ಅಗ್ರಹಾರದ ವಕೀಲ ವೆಂಕಟೇಶಮೂರ್ತಿ ಹಾಗೂ ರಾಧಿಕಾ ಧಾರ್ಮಿಕ ಕಾರ್ಯ ನೆರವೇರಿಸಿದರು. ಸೀತಾಕಲ್ಯಾಣವನ್ನು ಪುರೋಹಿತ ರವಿಶಂಕರ್ ಹಾಗೂ ತಂಡದವರು ನಡೆಸಿಕೊಟ್ಟರು.
ಮಂಗಳವಾರ ಕೃಷ್ಣಭಟ್ ಹಾಗೂ ಪ್ರಸನ್ನ ಐತಾಳ್ ನೇತೃತ್ವದಲ್ಲಿ ಸೀತಾರಾಮ ಪಟ್ಟಾಭಿಷೇಕ ನಡೆಯಿತು. ಬೆಳಗ್ಗೆ ಸುಮಂಗಲಿಯರು ಗಂಗಾಪೂಜೆ ನಡೆಸಿದರು. ನಂತರ ರುದ್ರಾಭಿಷೇಕಕ್ಕೆ ಗಂಗೆ ತಂದು ಆರತಿ ಎತ್ತಿದರು. ಗಣಪತಿ ಪೂಜೆ, ಮಂಟಪ ಪೂಜೆ, ಕಲ್ಪೋಕ್ತ ಪೂಜೆ, ರುದ್ರಾಭಿಷೇಕ ಪೂಜೆ, ಮಹಾ ಮಂಗಳಾರತಿ, ಅಷ್ಟವಧಾನ ಸೇವೆ, ಭಜನೆ ನಡೆಯಿತು.
ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಿಂದ ಸುಂಕದಕಟ್ಟೆ, ಹೊಸ ಬೀದಿವರೆಗೆ ರಾಜಬೀದಿ ಉತ್ಸವ ನಡೆಯಿತು.ಉತ್ಸವ ಬರುವ ಮುನ್ನ ಮನೆಗಳ ಮುಂದೆ ತಳಿರು ತೋರಣ, ರಂಗೋಲಿ ಹಾಕಲಾಗಿತ್ತು. ಮನೆ ಮುಂದೆ ಹಣ್ಣು ಕಾಯಿ ನೀಡಿ ಮಂಗಳಾರತಿ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net