

ಧಾರವಾಡ: ಭಾರತೀಯ ಸಂಗೀತ ವಿದ್ಯಾಲಯವು ದಾಸಾ ಟ್ರಸ್ಟ್, ಭೂಪಲಾಪುರ ಪ್ರತಿಷ್ಠಾನ ಹಾಗೂ ಪ್ರಶಾಂತ ನರ್ಸಿಂಗ್ ಹೋಂ ಸಹಯೋಗದಲ್ಲಿ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ "ಅನಂತ ನಮನ' ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಧಾರವಾಡ ಘರಾಣೆಯ ಉಸ್ತಾದ್ ಛೋಟೆ ರಹಿಮತ ಖಾನ್, ರಫೀಕ್ ಖಾನ್ ಹಾಗೂ ಶಫೀಕ್ ಖಾನ್ ಸಹೋದರರು ಸಿತಾರ ಪ್ರಸ್ತುತಪಡಿಸಿದರು. ಪಂ. ರಾಜೇಂದ್ರ ನಾಕೋಡ ತಬಲಾ ಸಾಥ್ ನೀಡಿದರು.