ಆಯುರ್ವೇದ ಕಲಿಕೆಗೆ ‘ಶಿಷ್ಯೋಪನಯನ’ ಮುನ್ನುಡಿ

26 RON 2
Published on

ರೋಣ: ಆಯುರ್ವೇದ ಕಲಿಕೆ ವಿಶಾಲ ಸಮುದ್ರದಂತಿದೆ. ಶ್ರದ್ಧೆ, ನಿಷ್ಠೆ, ಪರಿಶ್ರಮದಿಂದ ಕಲಿಕೆಯಲ್ಲಿ ತೊಡಗಿದರೆ ಮಾತ್ರ ಈ ಕ್ಷೇತ್ರದಲ್ಲಿ ಯಶಸ್ಸು ಸುಲಭವಾಗುತ್ತದೆ ಎಂದು ಡಾ. ಉಮೇಶ ಪುರದ ಹೇಳಿದರು.

ಪಟ್ಟಣದ ಆರ್‌ಜಿಇಎಸ್ ಸಂಸ್ಥೆಯ ರಾಜೀವ ಗಾಂಧಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸ್ನಾತ್ತಕೊತ್ತರ ಸಂಶೋಧನಾ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ‘ಶಿಷ್ಯೋಪನಯನ ಸಂಸ್ಕಾರ’ ಉದ್ಘಾಟಿಸಿ ಅವರು ಮಾತನಾಡಿದರು.

ಆಯುರ್ವೇದಕ್ಕೆ ಪುರಾತನ ಇತಿಹಾಸವಿದೆ. ಗುರುಕುಲ ಮಾದರಿಯ ಪದ್ಧತಿಯಲ್ಲಿ ಆಯುರ್ವೇದ ಕಲಿಕೆಗೆ ತೆರಳುವ ವಿದ್ಯಾರ್ಥಿಗಳಿಗೆ ಶಿಷ್ಯೋಪನಯನ ಸಂಸ್ಕಾರ ಜರುಗುತ್ತಿತ್ತು. ಈ ಪದ್ಧತಿ ಇಂದಿಗೂ ಆಚರಣೆಯಲ್ಲಿದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳು ಸವಾಲುಗಳನ್ನು ಧೈರ್ಯವಾಗಿ, ಧನಾತ್ಮಕವಾಗಿ ಎದುರಿಸಿದಲ್ಲಿ ಯಶಸ್ಸು ಸುಲಭವಾಗುತ್ತದೆ. ಶ್ರದ್ಧೆ, ನಿಷ್ಠೆ, ಭಕ್ತಿಯಿಂದ ಅಧ್ಯಯನ ಮಾಡುವುದು ಬಹು ಮುಖ್ಯವಾಗಿದೆ ಎಂದರು.

ಮಿಥುನ ಜಿ. ಪಾಟೀಲ ಮಾತನಾಡಿ, ಸಾಧಕರನ್ನು ಮಾದರಿಯನ್ನಾಗಿ ತೆಗೆದುಕೊಂಡು, ಸಾಧಕರ ಬದುಕು, ಸಾಧನೆ, ಶ್ರಮ, ಯಶಸ್ಸು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಧನೆ ಸುಲಭವಾಗುತ್ತದೆ ಎಂದರು.

ಡಾ.ಕೆ.ಬಿ. ದನ್ನೂರ, ಪ್ರಾಚಾರ್ಯ ಡಾ.ಐ.ಬಿ. ಕೊಟ್ಟೂರಶೆಟ್ಟರ, ಡಾ. ಪರಶುರಾಮ ತುರಬಿನ ಇತರರಿದ್ದರು. ಡಾ. ಸಾರ್ವರಿ ಕುಷ್ಟಗಿ ನಿರೂಪಿಸಿ, ಡಾ. ಶಶಿಕಲಾ ಬಾನಿ ಸ್ವಾಗತಿಸಿ, ರಿಯಾಜ್ ಅಹ್ಮದ್ ಕಣವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net