ರೈತರ ಅನುಕೂಲಕ್ಕಾಗಿ ಖರೀದಿ ಕೇಂದ್ರ ಆರಂಭಿಸಿ

Untitled design (21)
Published on

ಸಿರವಾರ: ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಕರ್ನಾಟಕ ರೈತ ಸಂಘ ತಾಲೂಕು ಸಮಿತಿ(ಕೆಆರ್‌ಎಸ್) ಬುಧವಾರ ತಹಸಿಲ್ ಕಚೇರಿ ಶಿರಸ್ತೇದಾರ್ ಫಕೃದ್ದೀನ್‌ಗೆ ಮನವಿ ಸಲ್ಲಿಸಿತು.

ಈಗಾಗಲೇ ಭತ್ತ ಕಟಾವು ಆರಂಭವಾಗಿದೆ. ಸರ್ಕಾರ ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ವಿಳಂಬ ಮಾಡಿದರೆ ದಳ್ಳಾಳಿಗಳಿಗೆ ಲಾಭ ಆಗಲಿದೆ. ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ತೊಗರಿ ಸಹ ಕಟಾವಿಗೆ ಬರಲಿದ್ದು , ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು.

ಸಮಿತಿ ಜಿಲ್ಲಾ ಸದಸ್ಯ ನಾಗರಾಜ ಬೊಮ್ಮನಾಳ, ಸಿರವಾರ ತಾಲೂಕು ಅಧ್ಯಕ್ಷ ಶಿವಯ್ಯ ನಾಯಕ ಲಕ್ಕಂದಿನ್ನಿ, ಮಾನ್ವಿ ತಾಲೂಕು ಅಧ್ಯಕ್ಷ ವೀರೇಶ ನಾಯಕ, ಪ್ರಮುಖರಾದ ಹನುಮಂತ ಕುಂಬಾರ, ಕೃಷ್ಣ ಮೂರ್ತಿ, ವೆಂಕಟೇಶ ನಾಯಕ, ಮಲ್ಲಯ್ಯ ನಾಯಕ, ಗೌರಪ್ಪ ನಾಯಕ, ವೆಂಕಟೇಶ ನಾಯಕ, ಹುಲಿಗೆಪ್ಪ ಮಡಿವಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net