ಜೀವನದಲ್ಲಿ ಸದ್ಗುಣಗಳನ್ನು ಅಳವಡಿಸಿಕೊಳ್ಳಿ

Sirwar NSS Camp
ನವಲಕಲ್ ಬೃಹನ್ಮಠದ ಆವರಣದಲ್ಲಿ ಬಸವೇಶ್ವರ ಕಾಲೇಜ್‌ಯಿಂದ ಹಮ್ಮಿಕೊಂಡ ಎನ್.ಎಸ್.ಎಸ್ ಶಿಬಿರದ ಸಮರೋಪ ಸಮಾರಂಭದಲ್ಲಿ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮಿಜೀ ಆಶೀರ್ವಚನ ನೀಡಿದರು. ಸಿಡಿಪಿಓ ನಾಗರತ್ನ ನಾಯಕ, ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ, ಕಾಲೇಜು ಪ್ರಾಚಾರ್ಯರ ಧರ್ಮಣ್ಣ, ಶಿಬಿರದ ಮೇಲ್ವಿಚಾರಕ, ಪತ್ರಕರ್ತ ಸುರೇಶ ಹೀರಾ ಇದ್ದರು.
Published on

ಸಿರವಾರ: ಪ್ರತಿಯೊಬ್ಬ ವಿದ್ಯಾರ್ಥಿವು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನವಲಕಲ್ ಬೃಹನ್ಮಠ ಆವರಣದಲ್ಲಿ ಬಸವೇಶ್ವರ ಕಾಲೇಜ್‌ಯಿಂದ ಶುಕ್ರವಾರ ಹಮ್ಮಿಕೊಂಡ ಎನ್.ಎಸ್.ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಎನ್.ಎಸ್.ಎಸ್ ಶಿಬಿರ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸುತ್ತದೆ. ಗ್ರಾಮಸ್ಥರಲ್ಲಿ ಬೇರೆ ಊರಿನ ವಿದ್ಯಾರ್ಥಿಗಳು ಗ್ರಾಮ ಸ್ವಚ್ಛ ಮಾಡುತ್ತಾರೆ. ನಮ್ಮ ಏರಿಯಾ, ವಾರ್ಡ್, ಗ್ರಾಮ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂಬ ಅರಿವು ಮೂಡುತ್ತದೆ.

ಹಿರಿಯರನ್ನು ಗೌರವದಿಂದ ಕಾಣಿ, ತಂದೆ ತಾಯಿಗಳಿಗೆ ಅಗೌರವ ತರುವಂತಹ ಕೆಲಸ ಮಾಡಬೇಡಿ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ. ಶಿಬಿರ ಜೀವನದ ಮೌಲ್ಯಗಳನ್ನು ಕಲಿಸುತ್ತದೆ ಅದನ್ನು ಕಲಿಬೇಕು. ಮುಂದೆ ಒಳ್ಳೆಯ ಶಿಕ್ಷಣ ಪಡೆಯುವುದರ ಜತೆಗೆ ಇತರರಿಗೆ ಮಾದರಿಯಾಗಿ ಎಂದು ಹೇಳಿದರು.

ಸಿಡಿಪಿಓ ನಾಗರತ್ನ ನಾಯಕ, ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ, ಕಾಲೇಜಿನ ಪ್ರಾಚಾರ್ಯರ ಧರ್ಮಣ್ಣ, ಶಿಬಿರದ ಮೇಲ್ವಿಚಾರಕ ರಮೇಶ, ಪತ್ರಕರ್ತ ಸುರೇಶ ಹೀರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net