

ಸಿರವಾರ: ಪೂರ್ವಿಕರ ಆರೋಗ್ಯದ ಗುಟ್ಟ ಸಿರಿಧಾನ್ಯಗಳಲ್ಲಿ ಅಡಗಿತ್ತು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ಚಂದ್ರ ಹಾಸನ ಹೇಳಿದರು.
ತಾಲೂಕಿನ ನಾರಬಂಡಾ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ವಿಜ್ಞಾನ ವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಸಿರಿಧಾನ್ಯ ಬಳಕೆ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಪ್ರಸ್ತುತ ಸಕ್ಕರೆ ಕಾಯಿಲೆ, ಆಧಿಕ ರಕ್ತದೊತ್ತಡ, ಬೊಜ್ಜು, ಕ್ಯಾನ್ಸರ್‌ನಂತಹ ಕಾಯಿಲೆಗಳು ಎಲ್ಲರೂ ಸಾಮಾನ್ಯವಾಗಿವೆ. ಇವುಗಳಿಂದ ಮುಕ್ತಿಹೊಂದಿ ಆರೋಗ್ಯಕರ ಜೀವನ ನಡೆಸಲು ಪೌಷ್ಟಿಕಾಂಶವುಳ್ಳ ಹಾಗೂ ಪೂರ್ವಜನರ ನೆಚ್ಚಿನ ಆಹಾರ ಪದ್ಧತಿಯಾದ ಸಿರಿಧಾನ್ಯಗಳ ಸೇವೆನೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ, ಮುಖ್ಯಶಿಕ್ಷಕ ಮಲ್ಲಪ್ಪ, ಹಿರಿಯ ಸಾಹಿತಿ ನಾಗರಾಜ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವಲಯದ ಮೇಲ್ವಿಚಾರಕ ರವಿಕುಮಾರ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಕವಿತಾ, ಸೇವಾ ಪ್ರತಿನಿಧಿ ನಾಗರತ್ನ ಹಾಗೂ ಸಂಘದ ಸದ್ಯಸರು ಉಪಸ್ಥಿತರಿದ್ದರು.