ಟಿಬಿ ಎಡದಂಡೆ 82ನೇ ಉಪಕಾಲುವೆಗೆ ನೀರು ಹರಿಸಿ

Untitled design (10)
ಸಿರವಾರದ ರಾಯಚೂರು-ಲಿಂಗಸುಗೂರು ಮುಖ್ಯರಸ್ತೆ ಸಂಚಾರ ತಡೆದು ರೈತರು ಬುಧವಾರ ಪ್ರತಿಭಟಿಸಿದರು. ಕರ್ನಾಟಕ ರೈತ ಸಂಘ ಗೌರವಧ್ಯಕ್ಷ ಚಾಮರಸ ಮಾಲಿಪಾಟೀಲ್, ಪ್ರಮುಖರಾದ ಬಸವರಾಜ ಮಾಲಿಪಾಟೀಲ್, ಲಿಂಗರೆಡ್ಡಿ, ಶಂಕರಗೌಡ ದೇವತಗಲ್, ಸೂಗುರಯ್ಯ ಆರ್.ಎಸ್ ಮಠ, ಬಸವರಾಜ, ನೀಲಪ್ಪಗೌಡ ಜಾನೇಕಲ್, ರಾಜಪ್ಪ, ಪ್ರಭಾಕರ ಪಾಟೀಲ್, ದೇವೇಂದ್ರ ನಾಯಕ, ವೀರೇಶ ಗವಿಗಟ್ಟ ಇತರರಿದ್ದರು.
Published on

ಸಿರವಾರ: ತುಂಗಭದ್ರಾ ಎಡದಂಡೆಯ 82ನೇ ಉಪಕಾಲುವೆಯ ಕೆಳಭಾಗದ ಗವಿಗಟ್ಟಿ, ಜಾನೇಕಲ್ ಅಮರಾವತಿ, ಆಲ್ದಾಳ ಗ್ರಾಮದ ಭಾಗಗಳಿಗೆ ಸಮರ್ಪಕವಾಗಿ ನೀರು ಹರಿಸಲು ಒತ್ತಾಯಿಸಿ ರೈತರು ಪಟ್ಟಣದಲ್ಲಿ ರಾಯಚೂರು-ಲಿಂಗಸುಗೂರು ಮುಖ್ಯರಸ್ತೆ ಸಂಚಾರ ತಡೆದು ಬುಧವಾರ ಪ್ರತಿಭಟಿಸಿದರು.

ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಹತ್ತಿ, ಜೋಳ, ಭತ್ತದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕೆಳ ಭಾಗದ ರೈತರ ಹೊಲ ಗದ್ದೆಗಳಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ರೈತರು ಸಾಲ ಮಾಡಿ ಬೆಳೆದಿದ್ದಾರೆ. ಈಗ ಸಮರ್ಪಕವಾಗಿ ನೀರು ಹರಿಸದಿದ್ದರೆ ಸಂಕಷ್ಟ ಅನುಭವಿಸಬೇಕಾಗುತ್ತದೆ. ನೀರು ಹರಿಸಲು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ ರವಿ.ಎಸ್.ಅಂಗಡಿ ಸ್ಥಳಕ್ಕೆ ಭೇಟಿ ನೀಡಿ, ಕಾಲುವೆಗಳನ್ನು ವೀಕ್ಷಣೆ ಮಾಡಿ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಹರಿಸುವ ಭರವಸೆ ನೀಡಿದರು. ರಸ್ತೆ ತಡೆ ನಡೆಸಿದ್ದರಿಂದ ವಾಹನಗಳ ಸವಾರರು ಪರದಾಡಿದರು.

ಮುಖಂಡರಾದ ಬಸವರಾಜ ಮಾಲಿ ಪಾಟೀಲ್, ಲಿಂಗರೆಡ್ಡಿ, ಶಂಕರಗೌಡ ದೇವತಗಲ್, ಸೂಗುರಯ್ಯ ಆರ್.ಎಸ್ ಮಠ, ಬಸವರಾಜ, ನೀಲಪ್ಪಗೌಡ ಜಾನೇಕಲ್, ರಾಜಪ್ಪ, ಪ್ರಭಾಕರ ಪಾಟೀಲ್, ದೇವೇಂದ್ರ ನಾಯಕ, ವೀರೇಶ ಗವಿಗಟ್ಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net