

ಸಿರವಾರ: ತಾರಣ್ಯದಲ್ಲೇ ದೇಶಕ್ಕಾಗಿ ಪ್ರಾಣದ್ಯಾಗ ಮಾಡಿ 115 ವರ್ಷ ಕಳೆದರೂ ಮಹಾನ್ ಹೋರಾಟಗಾರ ಭಗತ್‌ಸಿಂಗ್ ಮೇಲಿನ ಅಭಿಯಾನ ಒಂಚೂರು ಕಡಿಮೆಯಾಗಿಲ್ಲ ಎಂದು ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಚಂದ್ರಶೇಖರ ಗೌಡ ಎಲ್ಹೇರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರ ಬಳಿಯ ಭಗತ್ ಸಿಂಗ್ ವೃತ್ತದಲ್ಲಿ ಅವರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗುರುವಾರ ಮಾತನಾಡಿದರು.
ಸ್ವಾತಂತ್ರೃಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಹೋರಾಟಕ್ಕೆ ಧುಮುಕಿದ ಅವರು, ಬ್ರಿಟಿಷರ ನಿದ್ದೆಗೆಡಿಸಿದ್ದರು. ಇವರನ್ನು ಹೀಗೆಯೇ ಬಿಟ್ಟರೆ ಬ್ರಿಟಿಷ್ ಸರ್ಕಾರಕ್ಕೆ ಕಂಠವೆಂದು ಭಾವಿಸಿ ಭಯದಿಂದ ಅವರನ್ನು ಬಂಧಿಸಿ ಗಲ್ಲಿಗೇರಿಸುವ ತೀರ್ಮಾನ ಮಾಡಲಾಗುತ್ತಿದೆ. ಈ ವೇಳೆ ಬ್ರಿಟಿಷರನ್ನುದ್ದೇಶಿಸಿ ಮಾತನಾಡುವ ಭಗತ್‌ಸಿಂಗ್, ನೀವು ನನ್ನನ್ನು ಸಾಯಿಸಬಹುದು ಆದರೆ, ನನ್ನ ಆಲೋಚನೆಗಳನ್ನಲ್ಲ, ನನ್ನ ದೇಶಪ್ರೇಮದ ಕಿಚ್ಚನ್ನಲ್ಲ ಎಂದು ಖುಷಿಯಿಂದಲೇ ನೇಣುಗಂಬಕ್ಕೆ ಕೊರೆಳೊಡ್ಡಿದ ಅವರ ಆದರ್ಶ, ಯುವ ಮನಸುಗಳಲ್ಲಿ ಇಂದಿಗೂ ಹಸಿರಾಗಿದೆ ಎಂದರು.
ಪಪಂ ಸದಸ್ಯ ಅಜಿತ ಕುಮಾರ್ ಹೊನ್ನಟಗಿ, ಕರವೇ ಅಧ್ಯಕ್ಷ ರಾಘವೇಂದ್ರ ಖಾಜನಗೌಡ, ಭಗತ್ ಸಿಂಗ್ ಅಭಿಮಾನಿಗಳಾದ ರಂಗನಾಥ ನಾಯಕ, ನಾಗರಾಜ, ಸುದರ್ಶನ, ಪ್ರಕಾಶ, ಅರುಣಕುಮಾರ, ದೇವರಾಜ, ಬಂದೆನವಾಜ್ ಜಾಲಾಪುರ, ಇಬ್ರಾಹಿಂ ಜಂಬಲದಿನ್ನಿ, ಶ್ಯಾಮ್, ಸಂಸನ್, ಬೆಟ್ಟಪ್ಪ, ರತ್ನ ಕುಮಾರ, ಲಾಳೆಪ್ಪ ಇತರರಿದ್ದರು.