ಅನುದಾನ ಅನುಮೊದನೆಗಷ್ಟೇ ಸಭೆ ಸೀಮಿತ

14072020 Sirwar TP Meeting
Published on

ಸಿರವಾರ: ಅನುದಾನವನ್ನು ಅನುಮೊದನೆ ಪಡೆಯುವುದಕ್ಕಾಗಿ ಮಾತ್ರ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಮಂಗಳವಾರ ನಡೆಸಿ, ಇತರೆ ವಿಚಾರಗಳನ್ನು ಚರ್ಚೆ ಮಾಡದೆ ಕೈ ತೊಳೆದುಕೊಳ್ಳಲಾಯಿತು.

ನೂತನ ಅಧ್ಯಕ್ಷ ದೇವರಾಜ ನಾಯಕ ಕುರಕುಂದ, ಉಪಾಧ್ಯಕ್ಷೆ ಬಿ.ಯಲ್ಲಮ್ಮ ಪಾಂಡುರಂಗ ನೇತೃತ್ವದಲ್ಲಿ ಸಭೆ ನಡೆಯಿತು. 2020-21 ನೇ ಸಾಲಿನ 15ನೇ ಹಣಕಾಸು ಅನುದಾನದ 94 ಲಕ್ಷ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಹಾಗೂ ಮುಖ್ಯಮಂತ್ರಿ ಅನುದಾನ ಎರಡು ಕೋಟಿ ರೂ. ಅನಿಬರ್ಂಧಿತ ಅನುದಾನ ಕ್ರಿಯ ಯೋಜನೆಗೆ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಅನುಮೊದನೆ ನೀಡಲಾಯಿತು. ಬಂದ ಅನುದಾನದ ಬಗ್ಗೆ ಮಾತ್ರ ಚರ್ಚೆ ಮಾಡಲಾಯಿತೇ ಹೊರೆತು ಯಾವೊಬ್ಬ ಸದಸ್ಯರು ತಂತಮ್ಮ ಗ್ರಾಮಗಳ ಸಮಸ್ಯೆಗಳಾಗಲಿ, ಇತರೆ ಯಾವುದರ ಬಗ್ಗೆಯೂ ಚರ್ಚೆ ನಡೆಸಲಿಲ್ಲ. 10 ಕ್ಷೇತ್ರದ ಸದಸ್ಯರು, ಬೆರಳಣಿಕೆಯಷ್ಟು ಅಧಿಕಾರಿಗಳು ಭಾಗವಹಿಸಿದ್ದರು.

ತಾಪಂ ಇಒ ಶಿವಪ್ಪ, ಸಿಡಿಪಿಒ ಮುದುಕಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿ ಮಹಾದೇವಪ್ಪ ಕಂಮಾರ್, ಬಲ್ಲಟಗಿ ವೈದ್ಯಾಧಿಕಾರಿ ಮಲ್ಲಿಕಾರ್ಜುನ್ ಪಾಟೀಲ್ ನಂದರೆಡ್ಡಿ, ಪಶು ವೈದ್ಯಾಧಿಕಾರಿ ದೂಪದ್ ಸೇರಿದಂತೆ ತಾ.ಪಂ. ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net