ಜೋಳ ಖರೀದಿ ದಿನಾಂಕ ವಿಸ್ತರಿಸಿ

30032022 sirwar formars protest
Published on


ಸಿರವಾರ: ಬೆಂಬಲ ಬೆಲೆ ಯೋಜನೆಯಡಿ ಜೋಳ ಬೆಳೆಗಾರರ ನೋಂದಣಿ ಮತ್ತು ಮಾರಾಟಕ್ಕೆ ಮಾ.31 ಕೊನೆಯ ದಿನವಾಗಿದ್ದು, ದಿನಾಂಕ ವಿಸ್ತರಿಸಬೇಕೆಂಬುದು ರೈತರ ಒತ್ತಾಯವಾಗಿದೆ.

ಮೊದಲಿಗೆ ಕಲ್ಲೂರು ಮತ್ತು ಮಾನ್ವಿಯಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸಲಾಗಿತ್ತು. ರೈತರ ನೋಂದಣಿ ಹೆಚ್ಚಾಗಿದ್ದರಿಂದ ಮಾ.29ರಿಂದ ಪಟ್ಟಣದ ಯಂಕನಗಡ್ಡೆ ಕ್ಯಾಂಪ್‌ನಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಮಾರಾಟ ಪ್ರಕ್ರಿಯೆಗೆ ಕೇವಲ ಮೂರು ದಿನಗಳ ಸಮಯಾವಕಾಶ ನೀಡಿದ್ದರಿಂದ ರೈತರು ನೂರಾರು ವಾಹನಗಳಲ್ಲಿ ಜೋಳ ತುಂಬಿಕೊಂಡು ಬಂದು ಸಾಲು ನಿಲ್ಲುತ್ತಿದ್ದಾರೆ.

ಸಿರವಾರದಲ್ಲಿ ಖರೀದಿ ಕೇಂದ್ರ ಆರಂಭಿಸಿ ಮೂರೇ ದಿನದಲ್ಲಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿದರೆ ಅನ್ಯಾಯವಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net