ಮಳೆ ಹಾನಿ ಸಂತ್ರಸ್ತರಿಗೆ ಪರಿಹಾರ ವಿತರಣೆ

VITARANE
ಮಳೆ ಹಾನಿ ಸಂತ್ರಸ್ತರಿಗೆ ಸರ್ಕಾರದಿಂದ ಮಂಜೂರಾದ ಪರಿಹಾರ ಆದೇಶ ಪ್ರತಿಗಳನ್ನು ಶಾಸಕ ಜಿ.ಹಂಪಯ್ಯ ನಾಯಕ ಮಂಗಳವಾರ ಫಲಾನುಭವಿಗಳಿಗೆ ವಿತರಣೆ ಮಾಡಿದರು. ತಹಸೀಲ್ದಾರ್ ರವಿ.ಎಸ್. ಅಂಗಡಿ, ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ಸದಸ್ಯರಾದ ಹಸೇನ್ ಅಲಿಸಾಬ್, ಸೂರಿ ದುರಗಣ್ಣ ನಾಯಕ, ಮೌಲಸಾಬ್ ವರ್ಚಸ್, ಮಾತಾರ್ಂಡಪ್ಪ, ಹಾಜಿ ಚೌದ್ರಿ ಇತರರಿದ್ದರು.
Published on

ಸಿರವಾರ: ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ ಸರ್ಕಾರದಿಂದ ಮಂಜೂರಾದ ಪರಿಹಾರ ಆದೇಶ ಪ್ರತಿಯನ್ನು ಶಾಸಕ ಜಿ.ಹಂಪಯ್ಯ ನಾಯಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಫಲಾನುಭವಿಗಳಿಗೆ ವಿತರಣೆ ಮಾಡಿದರು.

ಪಟ್ಟಣದ 16ನೇ ವಾರ್ಡ್, ತಾಲೂಕಿನ ನವಲಕಲ್, ಬಲ್ಲಟಗಿ, ಶಾಖಾಪುರ, ಗಣದಿನ್ನಿ, ಅತ್ತನೂರು, ಸಣ್ಣ ಹೊಸೂರು ಗ್ರಾಮಗಳಲ್ಲಿ ಕಳೆದ ಎರಡು ತಿಂಗಳ ಹಿಂದೆ ಸುರಿದ ಮಳೆಗೆ 16 ಮನೆಗಳು ಹಾನಿಗೊಳಗಾಗಿದ್ದವು. ಇವುಗಳ ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರದಡಿ ತಲಾ 50 ಸಾವಿರ ರೂ.ನಂತೆ ಮಂಜೂರಾದ ಪರಿಹಾರ ಧನದ ಆದೇಶ ಪ್ರತಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರವಿ.ಎಸ್. ಅಂಗಡಿ, ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ಸದಸ್ಯರಾದ ಹಸೇನ್ ಅಲಿಸಾಬ್, ವೈ. ಭೂಪನಗೌಡ, ಸೂರಿ ದುರಗಣ್ಣ ನಾಯಕ, ಮೌಲಸಾಬ್ ವರ್ಚಸ್, ಮಾತಾರ್ಂಡಪ್ಪ, ಹಾಜಿ ಚೌದ್ರಿ, ಮುಖಂಡರಾದ ಶಿವಶರಣ ಸಾಹುಕಾರ್ ಅರಕೇರಿ, ಶ್ರೀನಿವಾಸ್ ಜಾಲಪುರ, ಬಸವರಾಜ ದಳಪತಿ, ಎಚ್.ಕೆ. ಅಮರೇಶ, ನಾಗರಾಜ ಚಿನ್ನಾನ್, ಜೆ. ಅಬ್ರಾಹಾಂ ಹೊನ್ನಾಟಗಿ, ಗ್ರಾಮ ಆಡಳಿತಾಧಿಕಾರಿ ವಿಲ್ಸನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net