ಸಿರವಾರದಲ್ಲಿ ಪಥ ಸಂಚಲನ

24 Sirwar 1 - Copy
Published on

ಸಿರವಾರ: ಪಟ್ಟಣದಲ್ಲಿ ಪೊಲೀಸರು ಹಾಗೂ ಅರೆ ಸೇನಾಪಡೆ ಸಿಬ್ಬಂದಿ ಸೋಮವಾರ ಪಥ ಸಂಚಲನ ನಡೆಸಿದರು. ಪಟ್ಟಣದ ಬಸವೇಶ್ವರ ವೃತ್ತದಿಂದ ಪಥ ಸಂಚಲನ ಆರಂಭಗೊಂಡಿತು. ಯುವಕರು ಹೂವು ಹಾಕಿ, ಮಹಿಳೆಯರು ಆರತಿ ಬೆಳಗುವ ಮೂಲಕ ಸಿಬ್ಬಂದಿಯನ್ನು ಸ್ವಾಗತಿಸಿದರು. ಬಯಲು ಆಂಜನೇಯ ದೇವಸ್ಥಾನದ ಮಾರ್ಗವಾಗಿ ವಿದ್ಯಾನಗರದವರೆಗೆ ಪಥ ಸಂಚಲನ ನಡೆಯಿತು. ಸಿಪಿಐ ಎಂ.ಶಶಿಕಾಂತ, ಪಿಎಸ್‌ಐ ಅವಿನಾಶ್.ಕೆ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net