

ಸಿರವಾರ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ರಾಜ್ಯದಲ್ಲಿ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ಪಟ್ಟಣದಲ್ಲಿ ತಾಲೂಕಾಡಳಿತ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗುರುವಾರ ಸ್ವಾಗತಿಸಲಾಯಿತು.
ತಹಸೀಲ್ದಾರ ರವಿ.ಎಸ್.ಅಂಗಡಿ ಮಾತನಾಡಿ, ಕನ್ನಡ ಭಾಷೆ ಉಳಿಸಿ, ಬೆಳೆಸುವಲ್ಲಿ ಸಾಹಿತ್ಯ ಪರಿಷತ್ ಅವಿರತವಾಗಿ ಶ್ರಮಿಸುತ್ತಿದೆ. ಇದಕ್ಕೆ ಎಲ್ಲರು ಕೈ ಜೋಡಿಸಿ. ನಾಡು, ನುಡಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಮಂಡ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೆ ಎಲ್ಲರು ಶ್ರಮಿಸೋಣ ಎಂದರು.
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಶಾಸಕರು, ಅಧಿಕಾರಿಗಳು, ಬೆಂಬಲಿಗರು ಕುಣಿದು ಕುಪ್ಪಳಿಸಿದರು. ಶಾಸಕ ಜಿ.ಹಂಪಯ್ಯ ನಾಯಕ, ಪಪಂ ಅಧ್ಯಕ್ಷ ವೈ.ಭೂಪನಗೌಡ, ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಸಿಡಿಪಿಒ ನಾಗರತ್ನಾ ನಾಯಕ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ ಹೀರಾ, ಬಿಇಒ ಚಂದ್ರಶೇಖರ ದೊಡ್ಮನಿ ಪ್ರಮುಖರಾದ ಆರ್.ಕೆ.ಅಮರೇಶಪ್ಪ, ಎನ್.ಉದಯ ಕುಮಾರ ಸಾಹುಕಾರ್, ಶಿವಶರಣ ಸಾಹುಕಾರ್ ಅರಕೇರಿ, ಜಿ.ವೀರೇಶ ಸಾಹುಕಾರ್, ಕಿರಿಲಿಂಗಪ್ಪ ಕವಿತಾಳ, ರಾಘವೇಂದ್ರ ಖಾಜನಗೌಡ, ವೆಂಕಟೇಶ ನಾಯಕ ದೇವತಗಲ್, ಮೌಲಸಾಬ್ ವರ್ಚಸ್, ಹಾಜಿ ಚೌದ್ರಿ ಡಾ.ಸುನೀಲ್ ಸರೋದೆ ಇತರರಿದ್ದರು.