ಪೌರ ಕಾರ್ಮಿಕರ ಸೇವೆ ಅನನ್ಯ

' Day
ಸಿರವಾರ ಪಟ್ಟಣದ ಸಜ್ಜಲಶ್ರೀ ಶರಣಮ್ಮನವರ ಆಶ್ರಮದಲ್ಲಿ ಪೌರ ಕಾರ್ಮಿಕರ ದಿನಾಚರಣೆಯನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಸೋಮವಾರ ಉದ್ಘಾಟಿಸಿದರು.
Published on

ಸಿರವಾರ: ವಾತಾವರಣದಲ್ಲಿ ಸ್ವಚ್ಛತೆ ಕಾಪಾಡುತ್ತ ನಮ್ಮ ಆರೋಗ್ಯ ರಕ್ಷಿಸುತ್ತಿರುವ ಪೌರ ಕಾರ್ಮಿಕರ ಸೇವೆ ಅನನ್ಯ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣ ಪಂಚಾಯಿತಿಂದ ಸೋಮವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ಪಟ್ಟಣ ಅಂದವಾಗಿ ಮತ್ತು ಜನ ಆರೋಗ್ಯದಿಂದ ಇದ್ದಾರೆಂದರೆ ಇದಕ್ಕೆ ಮುಖ್ಯ ಕಾರಣ ಪೌರ ಕಾರ್ಮಿಕರು. ಅವರ ಸೇವೆಗಿಂತ ಮಿಗಿಲಾದ್ದು ಯಾವುದೂ ಇಲ್ಲ ಎಂದರು. ಪೌರ ಕಾರ್ಮಿಕರಿಗೆ ಯಾವುದೇ ಸಮಸ್ಯೆ ಉಂಟಾದರೂ ಅದನ್ನು ಬಗೆಹರಿಸುವಲ್ಲಿ ಆಡಳಿತಾಧಿಕಾರಿ ಹಾಗೂ ನಾವು ಸದಾ ಸಿದ್ಧ ಎಂದು ಭರವಸೆ ನೀಡಿದರು.

ತಹಸೀಲ್ದಾರ್ ವಿಜಯೇಂದ್ರ ಹುಲಿ ನಾಯಕ, ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಮಿ, ಸದಸ್ಯರಾದ ಸೂರಿ ದುರುಗಣ್ಣ ನಾಯಕ, ಅಜಿತ್ ಕುಮಾರ್ ಹೊನ್ನಟಗಿ, ಕೃಷ್ಣ ನಾಯಕ, ಹಸೇನ್ ಅಲಿ, ಹಾಜಿ ಚೌದ್ರಿ, ಮೌಲಾಸಾಬ್ ವರ್ಚಸ್, ಲಕ್ಷ್ಮೀ, ಅಮರೇಶ ಗಡ್ಲ್, ಎಚ್.ಮಾರ್ಕಪ್ಪ, ಮುಖಂಡರಾದ ಜಿ.ಲೋಕರೆಡ್ಡಿ, ಈಶಪ್ಪ ಹೂಗಾರ, ಮಲ್ಲಪ್ಪ, ನಾಗರಾಜಗೌಡ, ಪಪಂ ಸಿಬ್ಬಂದಿ ಸುಧಾಕರ್, ವೀರೇಶ, ಶರಣ ಬಸವ, ಸಚಿನ್ ಚ್ಯಾಗಿ, ನಾಗರಾಜ ನೇಕಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net