ಬಾಂಗ್ಲಾದೇಶದ ಹಿಂದುಗಳ ಮೇಲಿನ ಹಲ್ಲೆ ಖಂಡನೀಯ; ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಆಕ್ರೋಶ

24102021 Sirwar hindus marder oppsite protest
Published on

ಸಿರವಾರದಲ್ಲಿ ಯುವಾ ಬ್ರಿಗೇಡ್‌ನಿಂದ ಪಂಜಿನ ಮೆರವಣಿಗೆ

ಸಿರವಾರ: ಬಾಂಗ್ಲಾದೇಶದ ಹಿಂದುಗಳ ಮೇಲೆ ಹಲ್ಲೆ, ದೇವಸ್ಥಾನಗಳ ಮೇಲಿನ ದಾಳಿ ಖಂಡನಿಯ ಎಂದು ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಯುವಾ ಬ್ರಿಗೇಡ್ ತಂಡ ಶನಿವಾರ ಸಂಜೆ ಹಮ್ಮಿಕೊಂಡ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ವ್ಯವಸ್ಥಿತ ದಾಳಿಗಳು ನಡೆಯುತ್ತಿವೆ. ಆ ದೇಶದ ಮತೀಯವಾದಿಗಳು ಹಿಂದುಗಳನ್ನು ದೇಶದಿಂದ ಹೊರ ದಬ್ಬಲು ಇಂತಹ ಕುತಂತ್ರ ಮಾಡುತ್ತಿದ್ದಾರೆ. ದಸರಾ ವೇಳೆ ದುರ್ಗಾದೇವಿ ಆರಾಧಕರು ತಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಪೆಟ್ರೋಲ್ ಬಾಂಬ್ ಎಸೆದು ಸುಟ್ಟಿರುವುದು, ದೇವಸ್ಥಾನ ಧ್ವಂಸ ಮಾಡಿರುವುದು, ಹಿಂದುಗಳ ಮನೆಗಳಿಗೆ ನುಗ್ಗಿ ಆಸಿ-್ತಪಾಸ್ತಿ ನಾಶ ಮಾಡಿರುವುದು, ಮಹಿಳೆಯರ ಮೇಲೆ ಕ್ರೌರ್ಯ ಎಸೆಗಿರುವುದು ಖಂಡನೀಯ. ಇಷ್ಟಾದರೂ ಅಲ್ಲಿನ ಸರ್ಕಾರ ಕೈಕಟ್ಟಿ ಕುಳಿದಿದೆ. ಅಲ್ಲಿನ ಹಿಂದುಗಳಿಗೆ ಅತ್ಮಸ್ಥೈರ್ಯ ತುಂಬಲು ಈ ಪಂಜಿನ ಮೆರವಣಿಗೆ ನಡೆಸಲಾಗಿದೆ. ಕೇಂದ್ರ ಸರ್ಕಾರ ಕೂಡಲೇ ವಿಶ್ವ ಸಂಸ್ಥೆಯ ಮೂಲಕ ಬಾಂಗ್ಲಾದೇಶಕ್ಕೆ ಸ್ಪಷ್ಟ ಸೂಚನೆ ಕೊಡಿಸಿ, ಹಿಂದುಗಳ ಹತ್ಯೆ ತಡೆಯಬೇಕು ಎಂದರು.

ನೀಲಗಲ್ ಬೃಹನ್ಮಠದ ಕಿರಿಯ ಶ್ರೀಗಳಾದ ಬಾಲಯೋಗಿ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ವೃತ್ತದಿಂದ ಬಸ್ ನಿಲ್ದಾಣದವರೆಗೆ ಪಂಜಿನ ಮೆರವಣಿಗೆ ನಡೆಯಿತು. ಮುಖಂಡರಾದ ಮಲ್ಲಿಕಾರ್ಜುನ್ ಜಕ್ಕಲದಿನ್ನಿ, ಜೆ.ಶಿವರಾಮ್ ರೆಡ್ಡಿಗೌಡ, ಜಿ.ಲೋಕರೆಡ್ಡಿ, ರಮೇಶ ದರ್ಶನಕರ್, ಜೆ.ದೇವರಾಜಗೌಡ, ದಾನನಗೌಡ, ವಿರೂಪಾಕ್ಷಿಗೌಡ ನಂದರೆಡ್ಡಿ, ಶಿವಶರಣ ಸಾಹುಕಾರ್ ಅರಕೇರಿ, ಡಾ. ಆರ್.ಕೆ ಸಂದೀಪ್, ಸಿದ್ದಪ್ಪಗೌಡ ಕುರಕುಂದಾ, ನೀಲಗಲ್ ಚಂದ್ರಶೇಖರ ಸಾಹುಕಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net