ಹಿಂದುಳಿದವರ ಮೇಲೆತ್ತುವ ಪ್ರಯತ್ನವಾಗಲಿ

14022022 Maski banajiga sangha
Published on

ಸಿರವಾರ: ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಬಣಜಿಗ ಸಂಘದ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮುದಾಯದ ಮುಖಂಡ ಚುಕ್ಕಿ ಸೂಗಪ್ಪ ಸಾಹುಕಾರ್, ಬಣಜಿಗ ಸಮುದಾಯಕ್ಕೆ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಇದೆ. ಎಸ್.ನಿಜಲಿಂಗಪ್ಪ, ಜೆ.ಎಚ್.ಪಟೇಲ್ ಸೇರಿ ಹಲವು ನಾಯಕರೇ ಇದಕ್ಕೆ ಸಾಕ್ಷಿ. ನಮ್ಮ ಸಮುದಾಯದಲ್ಲಿ ಅನೇಕರು ಹಿಂದುಳಿದಿದ್ದಾರೆ. ಅವರನ್ನು ಬೆಳಕಿಗೆ ತರುವ ಪ್ರಯತ್ನವಾಗಬೇಕೆಂದರು. ಪಪಂ ಸದಸ್ಯರಾಗಿ ಆಯ್ಕೆಯಾದ ಸಮುದಾಯದ ಶರಣಬಸವ ನಾಗೋಲಿ, ನಾಮನಿರ್ದೇಶನ ಸದಸ್ಯ ಮಹೇಶ ಪಾಟೀಲ್ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಳ್ಳೂರರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಎನ್.ಉದಯ ಕುಮಾರ ಸಾಹುಕಾರ್, ಅರಕೇರಿ ಮಲ್ಲಪ್ಪ ಸಾಹುಕಾರ್, ರೈತ ನಾಯಕಿ ಅನಿತಾ ಬಸವರಾಜ ಮಂತ್ರಿ, ಚಂದ್ರು ಸಾಹುಕಾರ್ ಕಳಸ್, ಜಿ.ವೀರೇಶ ಸಾಹುಕಾರ್, ನಾಗಪ್ಪ ಸಾಹುಕಾರ್ ಪತ್ತಾರ್, ಶರಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net