ಕಾನೂನುಗಳಿದ್ದರೂ ದೌರ್ಜನ್ಯಕ್ಕಿಲ್ಲ ಕೊನೆ

Sirawara Womens Day
ಸಿರವಾರದ ಬಸವೇಶ್ವರ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನಿವೃತ್ತಿ ಶಿಕ್ಷಕಿ ರಮಾದೇವಿ, ಶಿಕ್ಷಕಿಯರಾದ ಅನುರಾಧಾ, ಉಮಾದೇವಿ, ಯುಕ್ತಿ, ಲಕ್ಷ್ಮೀ, ಮಂಜುಳಾ ಸಗರದ ಅವರನ್ನು ಬುಧವಾರ ಸನ್ಮಾನಿಸಲಾಯಿತು.
Published on

ಸಿರವಾರ: ಮಹಿಳೆಯರ ಕೈಗಳು ತೊಟ್ಟಿಲು ತೂಗುವುದಕ್ಕೆ ಸೀಮಿತವಾಗಿರದೆ ಜಗತ್ತನ್ನು ಆಳುವ ಶಕ್ತಿ ಹೊಂದಿವೆ ಎಂದು ಶಿಕ್ಷಕಿ ಮಂಜುಳಾ ಸಗರದ ಹೇಳಿದರು.

ಪಟ್ಟಣದ ಬಸವೇಶ್ವರ ಕಾಲೇಜಿನಲ್ಲಿ ಜಿಪಂ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಮಹಿಳೆಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬೆಳವಣಿಗೆಯ ಹಿಂದೆ ತಂದೆಯಾಗಿ, ಅಣ್ಣನಾಗಿ, ಪತಿಯಾಗಿ ಪುರುಷರಿದ್ದಾರೆ. ಮಹಿಳೆಯರ ಪರವಾಗಿ ಅನೇಕ ಕಾನೂನುಗಳು ಜಾರಿಯಾಗಿದ್ದರೂ ದೌರ್ಜನ್ಯ ನಿಲ್ಲುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಣ್ಣುಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಣದಿಂದ ಉತ್ತಮ ಜೀವನ ಸಾಧ್ಯ. ಆಧುನಿಕತೆ ಹೆಸರಿನಲ್ಲಿ ನಮ್ಮ ಪರಂಪರೆ, ಆಚಾರ, ವಿಚಾರಗಳ ಬಗ್ಗೆ ದಾರಿ ತಪ್ಪಿಸುವ ಕೆಲಸ ನಡೆದಿದೆ. ನಾವು ಬೆಳೆದ ಸಂಸ್ಕಾರ, ಸಂಸ್ಕೃತಿ ಬಿಡಬಾರದು ಎಂದು ಮಂಜುಳಾ ಸಗರದ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net