ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಭೇಟಿ

12 Sirwar 2
Published on

ಸಿರವಾರ: 2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಬುಧವಾರ ಭೇಟಿ ನೀಡಿ ಕೇಂದ್ರಗಳ ಸ್ಥಿತಿ-ಗತಿ ಪರಿಶೀಲಿಸಿದರು.

ಬಳಿಕ ತಾಲೂಕಿನ ಕಲ್ಲೂರು, ಹರವಿ ಗ್ರಾಮಗಳ ಮತದಾನ ಕೇಂದ್ರಗಳಿಗೆ ತೆರಳಿ ಅಲ್ಲಿನ ಸೌಲಭ್ಯ ಪರಿಶೀಲಿಸಿದರು. ಮತದಾನ ಸಂದರ್ಭದಲ್ಲಿ ಕೇಂದ್ರದಲ್ಲಿ ಶೌಚಗೃಹ, ಕುಡಿವ ನೀರು, ವಿದ್ಯುತ್, ಅಂಗವಿಕಲರಿಗೆ ಗಾಲಿ ಕುರ್ಚಿ ವ್ಯವಸ್ಥೆ ಸೇರಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಮತದಾರರ ಪಟ್ಟಿಯಲ್ಲಿ ಗೊಂದಲವಿರದಂತೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ವಿಜಯೇಂದ್ರ ಎಸ್. ಹುಲಿನಾಯಕ, ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ಕಂದಾಯ ಅಧಿಕಾರಿ ಸಿದ್ದನಗೌಡ, ತಹಸಿಲ್ ಕಚೇರಿ ಸಿಬ್ಬಂದಿ ವಿಜಯಕುಮಾರ ಸುಗಂಧಿ, ರಾಣಾಜೀ, ವೀಲ್ಸನ್, ಶರಣಬಸವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net