ಆಂಜನೇಯ ದೇವಸ್ಥಾನದಲ್ಲಿ ದೀಪೋತ್ಸವ

13122020 Sirvara Deepostava
Published on

ಸಿರವಾರ: ಪಟ್ಟಣದ ಪೋಸ್ಟ್ ಆಫೀಸ್ ಪಕ್ಕದ ಆಂಜನೇಯ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತವಾಗಿ ಶನಿವಾರ ಸಂಜೆ ದೀಪೋತ್ಸವ ಕಾರ್ಯಕ್ರಮ ಜರುಗಿತು.

ಕಾರ್ತಿಕ ಮಾಸ ಪೂರ್ತಿ ಪ್ರತಿದಿನ ಪೂಜಾ ಕೈಂಕರ್ಯಗಳು ನಡೆದವು. ಪ್ರತಿ ಶನಿವಾರ ಎಲೆ ಪೂಜೆ ಅಭಿಷೇಕ, ನೈವೇದ್ಯ ಪ್ರಸಾದ, ತುಳಸಿಪೂಜೆ ನಿರಂತರವಾಗಿ ನಡೆದಿದ್ದವು. ರಾತ್ರಿ ನಂತರ ಹನುಮಾನ್ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ದೀಪೋತ್ಸವ ದೇವಸ್ಥಾನದ ನಿರ್ವಾಹಣೆ ಮಾಡಿದ ಪೂಜಾರಿ ರಮೇಶ್ ಹೂಗಾರ್‌ರನ್ನು ಭಕ್ತರು ಸನ್ಮಾನಿಸಿದರು. ಭಕ್ತರಾದ ರಮೇಶ್ ಯಾದವ್, ಸಂತೋಷ ಹಿರೇಮಠ ತೊಗಲೂರು, ಅಮರೇಶಪ್ಪ ಗೌಡ ಬೆಳವಿನೂರು, ನಾಗನಗೌಡ ಲಕ್ಕಂದಿನ್ನಿ, ಕುಂಬಾರ ವೀರಭದ್ರಪ್ಪ, ಸೂಗೂರೇಶ್ ಹೂಗಾರ್, ಹುಲಿಗೆಪ್ಪ ನಾಯಕ ಸೂರಿ ಸೇರಿ ಮಹಿಳೆಯರು ಅನೇಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net