

ಸಿರಗುಪ್ಪ: ತುಂಗಭದ್ರಾ ಅಣೆಕಟ್ಟೆಯಿಂದ ನದಿಗೆ ನೀರು ಹರಿಸುವ ಪ್ರಮಾಣ ಹಂತಹಂತವಾಗಿ ಹೆಚ್ಚಳವಾಗುತ್ತಿದ್ದು, ತಾಲೂಕಿನಲ್ಲಿ ನದಿಯು ಮೈತುಂಬಿ ಹರಿಯುತ್ತಿದೆ.
ಕೆಂಚನಗುಡ್ಡ ಗ್ರಾಮದ ವಸುಧೇಂದ್ರ ತೀರ್ಥರ ಮೂಲ ಬೃಂದಾವನದ ಪಕ್ಕದ ಭತ್ತದ ಗದ್ದೆಗಳಿಗೆ ನೀರು ನುಗ್ಗಿದ್ದು, ನಗರದ ಹೊರವಲಯದ ಐತಿಹಾಸಿಕ ಪ್ರಸಿದ್ಧ್ದ ಶ್ರೀಶಂಭುಲಿಂಗೇಶ್ವರ ದೇವಸ್ಥಾನ ಹತ್ತಿರದ ಶ್ರೀ ಆಂಜನೇಯ ವಿಗ್ರಹ ಮುಳುಗಡೆಯಾಗಿದೆ. ನೀರಿನ ಹರಿವನ್ನು ವೀಕ್ಷಿಸಲು ಜನರು ಹೆಚ್ಚು ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.