ಸಿರಗುಪ್ಪದ ಸೀಲ್‌ಡೌನ್ ಪ್ರದೇಶ 10ನೇ ವಾರ್ಡ್‌ನಲ್ಲಿ ಆರೋಗ್ಯ ಇಲಾಖೆಯಿಂದ ಮನೆ ಮನೆ ಸರ್ವೇ

Siriguppa Home Survey
ಸಿರಗುಪ್ಪದ 10ನೇ ವಾರ್ಡ್‌ನ ಬಫರ್ ಜೋನ್ ಪ್ರದೇಶದ ಜನರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಜಾಗೃತಿ ಮೂಡಿಸಿದರು.
Published on

ಸಿರಗುಪ್ಪ: ಸೀಲ್‌ಡೌನ್ ಆಗಿರುವ ನಗರದ 10ನೇ ವಾರ್ಡ್‌ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸೋಮವಾರ ಮನೆ ಮನೆ ಸರ್ವೇ ನಡೆಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಮಾತನಾಡಿ, ಸೀಲ್‌ಡೌನ್ ಪ್ರದೇಶದ ನಿವಾಸಿಗಳು ಯಾವುದೇ ಕಾರಣಕ್ಕೂ ಹೊರಗೆ ಓಡಾಡಬಾರದು. ಅಲ್ಲದೆ ಬಫರ್‌ಜೋನ್‌ನಲ್ಲಿ ಇರುವವರು ಅಗತ್ಯವಿದ್ದರಷ್ಟೆ ಹೊರಗೆ ಬರಬೇಕು.

ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿಬಾರಿ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅಡುಗೆ ತಯಾರಿಸಿದ ನಂತರ ಮುಚ್ಚಿಡಬೇಕು. ಅನಾರೋಗ್ಯ ಸಮಸ್ಯೆ ಇದ್ದರೆ ತಕ್ಷಣವೇ ಸಿಬ್ಬಂದಿ ಗಮನಕ್ಕೆ ತರಬೇಕು. ಕರೊನಾ ಹರಡದಂತೆ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು. ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಸುಜಾತಾ, ಅಂಗನವಾಡಿ ಕಾರ್ಯಕರ್ತೆ ರಂಗಮ್ಮ, ಆಶಾ ಕಾರ್ಯಕರ್ತೆ ಬಸಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net