ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಗೈದ ಸಾವಿರಾರು ಭಕ್ತರು

01122020 Siraguppa Tungabhadra Pushkara
Published on

ಸಿರಗುಪ್ಪ: ತಾಲೂಕಿನ ಕೆಂಚನಗುಡ್ಡ ಹತ್ತಿರ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಪುಷ್ಕರದ ಕೊನೆಯ ದಿನವಾದ ಮಂಗಳವಾರ ಸಾವಿರಾರು ಭಕ್ತರು ಪುಣ್ಯ ಸ್ನಾನಮಾಡಿ ವಸುದೇಂದ್ರ ತೀರ್ಥರ ದರ್ಶನ ಪಡೆದರು.

12 ವರ್ಷಗಳಿಗೊಮ್ಮೆ ಬರುವ ತುಂಗಭದ್ರಾ ಪುಷ್ಕರದ ಅಂಗವಾಗಿ ನದಿಯಲ್ಲಿ ಸ್ನಾನ ಮಾಡುವುದರಿಂದ ಬದುಕಿನಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೀಮಾಂಧ್ರ ಪ್ರದೇಶದ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಆಗಮಿಸಿ ಪುಣ್ಯಸ್ನಾನ ನೆರವೇರಿಸಿ ಗಂಗೆ ಪೂಜೆ ಮಾಡಿ ತುಂಗಭದ್ರೆಗೆ ಕಾಯಿ, ಕರ್ಪೂರ ಸಮರ್ಪಿಸಿ, ನದಿ ಪೂಜೆ ನೆರವೇರಿಸಿದರು.

ನೂರಾರು ಜನ ತಮ್ಮ ಪಿತೃಗಳಿಗೆ ಪಿಂಡಪ್ರಧಾನ ನೆರವೇರಿಸಿದರೆ, ಮಹಿಳೆಯರು ದೀಪಗಳನ್ನು ಹಚ್ಚಿ ನದಿಗೆ ಬಿಟ್ಟು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಬೇಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net