ದೊಡ್ಡಹಳ್ಳದ ಸೇತುವೆ ಮೇಲೆ ಮಳೆನೀರು: ಹರಿಯುತ್ತಿರುವ ಜಲದಲ್ಲೇ ಜನರ ಸಂಚಾರ

14112021 Siraguppa rain
Published on

ಸಿರಗುಪ್ಪ: ತಾಲೂಕಿನ ಮೇಲ್ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಎಚ್.ಹೊಸಳ್ಳಿ ಗ್ರಾಮದ ಹತ್ತಿರವಿರುವ ದೊಡ್ಡಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಪ್ರಯಾಣಿಕರು, ರೈತರು, ಸಾರ್ವಜನಿಕರು ಹರಸಾಹಸ ಮಾಡಿ ಸೇತುವೆ ದಾಟುತ್ತಿದ್ದಾರೆ.

ದೊಡ್ಡಹಳ್ಳದ ಸೇತುವೆ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮಳೆನೀರು ರಭಸವಾಗಿ ಹರಿಯುತ್ತಿದ್ದರೂ ಲೆಕ್ಕಿಸದೆ ಕೃಷಿ ಚಟುವಟಿಕೆಗಳಿಗೆ ತೆರಳುವ ರೈತರು ಮತ್ತು ವಿವಿಧ ಗ್ರಾಮಗಳ ಜನರು ಬೈಕ್, ಲಘುವಾಹನಗಳಲ್ಲಿ ತೆರಳುತ್ತಿದ್ದಾರೆ. ಕೆಲವರು ಸುತ್ತುವರೆದು ಬೇರೆ ಮಾರ್ಗದ ಮೂಲಕ ಸಂಚರಿಸುತ್ತಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ಹರಿಯುವುದು ಸಾಮಾನ್ಯ. 1994ರಲ್ಲಿ ಈ ಸೇತುವೆ ಮೇಲೆ ನೀರು ಹರಿಯುತ್ತಿದ್ದ ಸಂದರ್ಭದಲ್ಲಿ ಕೂಲಿ ಕೆಲಸ ಮಾಡಿ ್ರಾಮಕ್ಕೆ ತೆರಳುತ್ತಿದ್ದ ಎಚ್.ಹೊಸಳ್ಳಿ ಗ್ರಾಮದ 11 ಜನ ಕೊಚ್ಚಿಹೋಗಿ ಮೃತಪಟ್ಟಿದ್ದರು. ಆದರೂ ಸೇತುವೆ ಎತ್ತರಿಸುವುದು ಇಲ್ಲವೆ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎನ್ನುವ ಗ್ರಾಮಸ್ಥರ ಬೇಡಿಕೆ ಈಡೇರಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net