ಸ್ವಗ್ರಾಮಕ್ಕೆ ಹೊರಟವರಿಗೆ ಆಹಾರ, ನೀರಿನ ವ್ಯವಸ್ಥೆ, ಶಾಸಕ ಎಂ.ಎಸ್.ಸೋಮಲಿಂಗಪ್ಪ ಮುತುವರ್ಜಿ

29032020 Siraguppa MLA Food, water supply
Published on

ಸಿರಗುಪ್ಪ: ಕರೊನಾ ಭೀತಿ ಹಿನ್ನೆಲೆಯಲ್ಲಿ ಮಹಾನಗರಗಳಿಂದ ತಾಲೂಕಿನ ಹಳೇಕೋಟೆ ಮಾರ್ಗವಾಗಿ ಸ್ವಂತ ಊರುಗಳಿಗೆ ಹೊರಟಿದ್ದ ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಯ ಕಾರ್ಮಿಕರಿಗೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ನೇತೃತ್ವದಲ್ಲಿ ಆಹಾರ ಹಾಗೂ ನೀರು ವಿತರಿಸಿದರು.

ನಂತರ ಮಾತನಾಡಿದ ಅವರು, ಆಹಾರ, ನೀರು ಇಲ್ಲದೆ ಜನ ಬದುಕುವುದು ಕಷ್ಟ. ಗುಳೆಯಿಂದ ವಾಪಸಾಗುತ್ತಿರುವ ಕಾರ್ಮಿಕರಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಚಿಕ್ಕ ಮಕ್ಕಳು ಊಟವಿಲ್ಲದೆ ಒಂದು ಎರಡು ದಿನಗಳ ಕಾಲ ಪ್ರಯಾಣಿಸುತ್ತಿರುವುದರಿಂದ ಕೈಲಾದ ಸಹಾಯ ಮಾಡಿದ್ದೇವೆ. ಮುಂದಿನ ಊರಿನವರು ಆಹಾರದ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಆರ್.ಸಿ.ಪಂಪನಗೌಡ, ಮುಖಂಡರಾದ ಮೆಕಲಿ ವೀರೇಶ, ಕಂಬಾಳಿ ಮಲ್ಲಿಕಾರ್ಜುನ, ವೈ.ಡಿ.ವೆಂಕಟೇಶ, ಮಹಾದೇವ, ಎಂ.ಎಸ್.ವೆಂಕಟಪ್ಪ, ಎಂ.ಎಸ್.ಸಿದ್ದಪ್ಪ, ದಮ್ಮೂರು ಮಂಜುನಾಥ, ವೈ.ಶಂಕ್ರಪ್ಪ, ರಾಮಕೃಷ್ಣ, ಮಲ್ಲಿಕಾರ್ಜುನ, ನಟರಾಜ, ಚಾಗಿಸುಬ್ಬಯ್ಯ, ಶೇಖಣ್ಣ, ಈರಣ್ಣ, ಅಲಿಪೀರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net