ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ: ಬಸ್‌ನಲ್ಲಿ ಬಿಟ್ಟು ಹೋಗಿದ್ದ ಹಣ-ಚೆಕ್ ಹಿಂದಿರುಗಿಸಿದರು

24092021 Siraguppa Bus employes
Published on

ಸಿರಗುಪ್ಪ: ನಗರದಿಂದ ಚೆಳ್ಳೆಕೂಡ್ಲೂರು ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ನಲ್ಲಿ 1.07 ಲಕ್ಷ ರೂ.ನಗದು ಮತ್ತು 80 ಸಾವಿರ ರೂ. ಮೌಲ್ಯದ ಚೆಕ್ ಇರುವ ಬ್ಯಾಗ ಅನ್ನು ಚಾಲಕ ಮತ್ತು ನಿರ್ವಾಹಕರು ಬುಧವಾರ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ನೆರೆಯ ಹೈದರಾಬಾದ್ ಮೂಲದ ಶಾಂತಿ ಸಪ್ಲೈಯರ್ಸ್‌ ಕಂಪನಿಯ ಮಾರಾಟ ವ್ಯವಸ್ಥಾಪಕ ರಂಜಿತ ಎಂಬುವವರು ಸಿಂಧನೂರು ಬಸ್ ಎಂದು ಚೆಳ್ಳೆಕೂಡ್ಲೂರು ಗ್ರಾಮಕ್ಕೆ ತೆರಳುವ ಬಸ್ ಹತ್ತಿದ್ದು, ನಂತರ ತಿಳಿದು ಅವಸರದಿಂದ ಬ್ಯಾಗ್ ಮರೆತು ಇಳಿದಿದ್ದರು. ನಿರ್ವಾಹಕ ಎಂ.ಚಂದ್ರಶೇಖರ ಭಜಂತ್ರಿ ಮತ್ತು ಚಾಲಕ ಹುಚ್ಚಪ್ಪ ಚಳ್ಳೆಕೂಡ್ಲೂರು ಗ್ರಾಮಕ್ಕೆ ತೆರಳಿದ ನಂತರ ಬ್ಯಾಗ್ ಅನ್ನು ಗಮನಿಸಿ, ಅದರಲ್ಲಿದ್ದ ಫೋನ್ ನಂಬರ್‌ಗೆ ಕರೆ ಮಾಡಿ ಗ್ರಾಮದ ಮಾರಿಕಾಂಬಾ ದೇವಸ್ಥಾನದಲ್ಲಿ ರಂಜಿತ್‌ಗೆ ಹಣ, ಚೆಕ್ ಇರುವ ಬ್ಯಾಗನ್ನು ಹಿಂದಿರುಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net