

ಸಿರಗುಪ್ಪ: ನಗರದ ಎಸ್.ಇ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ 2020-21ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆ ಭಾನುವಾರ ನಡೆಯಿತು.
ಬೆಂಗಳೂರಿನ ಸಮಗ್ರ ಶಿಕ್ಷಣ ಅಭಿಯಾನದ ಸೀನಿಯರ್ ಪ್ರೋಗ್ರಾಮರ್ ಹಾಗೂ ತಾಲೂಕು ಪರೀಕ್ಷೆ ಅಧಿಕಾರಿ ಪಿ.ಮಂಜುಳಾ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ ಆದರ್ಶ ವಿದ್ಯಾಲಯದ ಮೂಲಕ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. 2020-21ನೇ ಸಾಲಿನ ಪ್ರವೇಶ ಪರೀಕ್ಷೆಗೆ ತಾಲೂಕಿನ 546 ಬಾಲಕರು, 492 ಬಾಲಕಿಯರು ಸೇರಿ ಒಟ್ಟು 1038 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 73 ವಿದ್ಯಾರ್ಥಿಗಳು ಗೈರು ಆಗಿದ್ದು, 965 ಮಕ್ಕಳು ಹಾಜರಾಗಿದ್ದಾರೆ ಎಂದು ತಿಳಿಸಿದರು. ಬಿಇಒ ಪಿ.ಡಿ.ಭಜಂತ್ರಿ, ಶಿಕ್ಷಣ ಸಂಯೋಜಕ ಬಸವರಾಜಯ್ಯ ಸ್ವಾಮಿ ಇತರರಿದ್ದರು.