

ಸಿರಗುಪ್ಪ: ತಾಲೂಕಿನಲ್ಲಿ ಬುಧವಾರ ನಡೆದ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಚ್ಚೊಳ್ಳಿ ಹೋಬಳಿಯ ಮತಗಟ್ಟೆಯಲ್ಲಿ ನಾಲ್ವರು ಮತದಾರರಿದ್ದು, ಇವರಿಗಾಗಿ ಮತದಾನ ಕೇಂದ್ರದಲ್ಲಿ ಏಳು ಸಿಬ್ಬಂದಿಯನ್ನು ಕಾರ್ಯಕ್ಕೆ ನಿಯೋಜಿಸಲಾಗಿತ್ತು. ನಾಲ್ವರಲ್ಲಿ ಕೇವಲ ಇಬ್ಬರು ಮತದಾರರು ಮಾತ್ರ ತಮ್ಮ ಮತವನ್ನು ಚಲಾಯಿಸಿದ್ದು, ಉಳಿದಿವದವರು ಮತದಾರರು ಮತ ಚಲಾಯಿಸಲಿಲ್ಲ.
ಹಚ್ಚೊಳ್ಳಿ ಹೋಬಳಿಯಲ್ಲಿ ಕೇವಲ ನಾಲ್ವರು ಶಿಕ್ಷಕರು ಮಾತ್ರ ಮತದಾನದ ಹಕ್ಕನ್ನು ಹೊಂದಿದ್ದು, ಗ್ರಾಮದ ನಾಡಕಚೇರಿಯಲ್ಲಿ ಮತಗಟ್ಟೆ ಸ್ಥಾಪನೆ ಮಾಡಲಾಗಿತ್ತು. ಈ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿ, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆ, ಆರೋಗ್ಯ ಇಲಾಖೆ ಸಿಬ್ಬಂದಿ, ಡಿ-ಗ್ರೂಪ್ ನೌಕರ ಸೇರಿ ಒಟ್ಟು ಏಳು ಸಿಬ್ಬಂದಿ ಕಾರ್ಯ ನಿರ್ವಹಿಸಿದರು. ಈ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತದಾರರಿಲ್ಲದೆ ಖಾಲಿ ಕುಳಿತಿದ್ದು, ಕಂಡು ಬಂತು.