ಪ್ರಸನ್ನಚಂದ್ರಶೇಖರ ಆಶ್ರಮಕ್ಕೆ ಸ್ವರ್ಣವಲ್ಲೀ ಶ್ರೀ ಭೇಟಿ

13-SIRSI-SWARNAWALLI
Published on

ಶಿರಸಿ: ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಬೆಂಗಳೂರಿನ ಪೀಣ್ಯದ ಸಮೀಪ ಇರುವ ಶ್ರೀ ಪ್ರಸನ್ನಚಂದ್ರಶೇಖರ ಆಶ್ರಮ, ಶಿವ ಪಂಚಾಯತನ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದರು. ಭವ್ಯವಾಗಿ ನಿರ್ವಣಗೊಂಡ ಶಿಲಾ ದೇವಸ್ಥಾನದಲ್ಲಿ ಸೂರ್ಯ, ಗಣಪತಿ, ದುರ್ಗಾ, ಶಿವ, ವಿಷ್ಣು ದೇವರ ದರ್ಶನ ಪಡೆದರು. ಧರ್ಮದರ್ಶಿಗಳಾದ ವಿ. ಶ್ರೀಧರ ಭಟ್ಟರು, ಪ್ರಾಕಾರಗಳಲ್ಲಿ ಇರುವ ನಾಗಬನ, ಗೋಶಾಲೆ, ಪುಷ್ಕರಣಿ, ಯಜ್ಞಶಾಲೆ, ಅನ್ನಪೂರ್ಣ ಭವನಗಳಿಗೆ ಶ್ರೀಗಳ ಭೇಟಿ ಮಾಡಿಸಿದರು. ಸಭಾಭವನದಲ್ಲಿ ಭಕ್ತರು ಶ್ರೀ ಪಾದುಕಾ ಪೂಜೆ ನೆರವೇರಿಸಿದರು. ನಂತರ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಸುಮಾರು 2 ಗಂಟೆಗಳ ಕಾಲದ ಭೇಟಿ ಸಂದರ್ಭದಲ್ಲಿ ಶ್ರೀಗಳವರು ಸಸ್ಯವನದಲ್ಲಿ ಸಸಿ ನೆಟ್ಟು, ಅತಿಥಿ ಭವನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net