ಶ್ರೀರಾಮ ನವರತ್ನಂ ಸೆ. 9ರಿಂದ 17ರವರೆಗೆ

7-talamaddale
Published on

ಶಿರಸಿ: ಇಲ್ಲಿನ ಯಕ್ಷ ಸಂಭ್ರಮ ಟ್ರಸ್ಟ್ ನಡೆಸುವ 9ನೇ ವರ್ಷದ ವಾರ್ಷಿಕ ತಾಳಮದ್ದಳೆ ಸರಣಿ ಶ್ರೀರಾಮ ನವರತ್ನಂ ಸೆ. 9ರಿಂದ 17ರವರೆಗೆ ನಡೆಯಲಿದ್ದು, 9 ದಿನ ಶ್ರೀರಾಮನ ಸುತ್ತ ಕಥಾ ಹಂದರ ಬಿಚ್ಚಿಕೊಳ್ಳಲಿದೆ.
ಪ್ರಥಮ ದಿನ ಸೆ. 9ರಂದು ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸಂಜೆ 5.30ಕ್ಕೆ ದಿ. ಚಂದು ಬಾಬು ಪ್ರಶಸ್ತಿಯನ್ನು ವಿ.ಆರ್. ಹೆಗಡೆ ಅತ್ತಿಮುರಡು ಅವರಿಗೆ ಸ್ವರ್ಣವಲ್ಲೀ ಮಠಾಧೀಶ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪ್ರದಾನ ಮಾಡುವರು. ಕಟೀಲು ಹರಿನಾರಾಯಣದಾಸ ಆಸ್ರಣ್ಣ ಪಾಲ್ಗೊಳ್ಳುವರು. ಬಳಿಕ ಶ್ರೀರಾಮಾದರ್ಶ ತಾಳಮದ್ದಳೆ ನಡೆಯಲಿದೆ.
ಸೆ. 10 ರಿಂದ 17ರತನಕ ನಗರದ ಟಿಎಂಎಸ್ ಸಭಾಂಗಣದಲ್ಲಿ ಪ್ರತಿದಿನ ಸಂಜೆ 4 ರಿಂದ ನಡೆಯಲಿದೆ. ಹಿಮ್ಮೇಳದಲ್ಲಿ ಪರಮೇಶ್ವರ ಹೆಗಡೆ ಐನಬೈಲ್, ಪ್ರಸನ್ ಭಟ್ ಬಾಳಕಲ್, ರವೀಂದ್ರ ಅಚವೆ, ರವಿಚಂದ್ರ ಕನ್ನಡಿಕಟ್ಟೆ, ಗಜಾನನ ಭಟ್ ತುಳಗೇರಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಂತ ದಂತಳಿಕೆ, ಎ.ಪಿ. ಪಾಠಕ್, ಚಂದ್ರಕಾಂತ ಮೂಡ್ಬಳ್ಳೆ, ವಿದ್ವಾನ್ ಗಣಪತಿ ಭಟ್ ಮೊಟ್ಟೆಗದ್ದೆ, ಚಿನ್ಮಯ್ ಭಟ್ ಾಗವತರಾಗಿ ಭಾಗವಹಿಸುವರು. ಎನ್.ಜಿ. ೆಗಡೆ, ನರಸಿಂಹ ಭಟ್ಟ ಹಂಡ್ರಮನೆ, ಪ್ರಸನ್ ಹೆಗ್ಗಾರ್, ಅನಿರುದ್ಧ ಹೆಗಡೆ, ವಿಘ್ನೇಶ್ವರ ಗೌಡ, ಶಂಕರ್ ಭಾಗವತ್, ಅಕ್ಷಯ್ ವಿಟ್ಲ ಪಾಲ್ಗೊಳ್ಳಲಿದ್ದಾರೆ. ಪ್ರಸಿದ್ಧ ಅರ್ಥದಾರಿಗಳಾದ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ, ಆಸ್ರಣ್ಣ ಹರಿನಾರಾಣದಾಸ, ವಾಸುದೇವ ರಂಗ ಭಟ್ಟ, ಡಾ. ಜಿ.ಎಲ್. ಹೆಗಡೆ ಕುಮಟಾ, ವಿಶ್ವೇಶ್ವರ ಭಟ್ಟ, ಮಂಜುನಾಥ ಗೊರಮನೆ ಮಹೇಶ ಭಟ್ ಇಡುಗುಂದಿ, ಸ್ಮಿತಾ ಜೋಶಿ, ಶಂಭು ಶರ್ಮ, ಹರೀಶ ಬಳಂತಿಮೊಗರು, ವಿನಾಯಕ ಭಟ್, ನಿರ್ಮಲ ಗೋಳಿಕೊಪ್ಪ, ಹಿರಣ್ಯ ವೆಂಕಟೇಶ ಭಟ್, ಗಣಪತಿ ಭಟ್ ಸಂಕದಗುಂಡಿ, ದಿವಾಕರ ಹೆಗಡೆ ಕೆರೆಹೊಂಡ, ಜಯಪ್ರಕಾಶ್ ಶೆಟ್ಟಿ, ಎಂ.ಎನ್. ಹೆಗಡೆ ಯಲ್ಲಾಪುರ, ಡಿ.ಕೆ. ಗಾಂವ್ಕರ್, ಸತೀಶ ಶೆಟ್ಟಿ, ವಾದಿರಾಜ ಕಲ್ಲೂರಾಯ, ಎಂ.ವಿ. ಹೆಗಡೆ, ರಾಮಚಂದ್ರ ಶಿರಳಗಿ, ಶ್ರೀಧರ ಚಪ್ಪರಮನೆ, 50ಕ್ಕೂ ಅಧಿಕ ಹಿಮ್ಮೇಳ, ಮುಮ್ಮೇಳ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸೆ. 17ರಂದು ಟಿಎಂಎಸ್ ಸಭಾಂಗಣದಲ್ಲಿ ನಡೆಯಲಿದ್ದು, ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಟಿಎಂಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ ಪಾಲ್ಗೊಳ್ಳುವರು ಎಂದು ಟ್ರಸ್ಟ್ ಕೋಶಾಧ್ಯಕ್ಷ ಸೀತಾರಾಮ ಚಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net