ಶಿರಸಿ ಕುಮಟಾ ರಸ್ತೆ ವಾಹನ ಸಂಚಾರ ಸಂಪೂರ್ಣ ಬಂದ್‌

23KWR6
Published on

ಶಿರಸಿ/ಕುಮಟಾ: ರಾಷ್ಟ್ರೀಯ ಹೆದ್ದಾರಿ 766 ಇ ನಲ್ಲಿ ಶಿರಸಿ-ಕುಮಟಾ ನಡುವೆ ಬೆಣ್ಣೆ ಹೊಳೆಗೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಕಿರು ಸೇತುವೆ ಶುಕ್ರವಾರ ಕೊಚ್ಚಿಕೊಂಡು ಹೋಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹಾಗೂ ಅಭಿವೃದ್ಧಿಗಾಗಿ ಕಳೆದ ನವೆಂಬರ್ ತಿಂಗಳಿAದ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೆ ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಬೈಕ್, ಕಾರು ಮುಂತಾದ ಸಣ್ಣ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಈಗ ತಾತ್ಕಾಲಿಕ ಬ್ರಿಜ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರಿಂದ ಕೆಲವು ವಾಹನಗಳು ಅರ್ಧಕ್ಕೇ ಸಿಲುಕಿಕೊಂಡಿವೆ. ಕುಮಟಾದ ಕತಗಾಲ್ ಹಾಗೂ ಶಿರಸಿಯ ಮತ್ತಿಘಟ್ಟ ಕ್ರಾಸ್ ಬಳಿ ವಾಹನಗಳನ್ನು ನಿರ್ಬಂಽಸಲಾಗುತ್ತಿದೆ. ಯಾವುದೇ ಸಣ್ಣ ವಾಹನಗಳನ್ನು ಮುಂದೆ ಬಿಡುವುದಿಲ್ಲ ಎಂದು ಕುಮಟಾ ಸಿಪಿಐ ಯೋಗೇಶ ಕೆ.ಎಂ.ತಿಳಿಸಿದ್ದಾರೆ. ಶಿರಸಿ ಕುಮಟಾ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧವನ್ನು ಜೂನ್ 30 ರವರೆಗೂ ವಿಸ್ತರಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಆದೇಶ ಹೊರಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net