

ಶಿರಸಿ: ಎರಡು ದಿನಗಳ ಉತ್ತರ ಕನ್ನಡ ಜಿಲ್ಲಾ 24ನೇ ಸಾಹಿತ್ಯ ಸಮ್ಮೇಳನಕ್ಕೆ Kannada Sahitya Sammelana ಈಗ ಶಿರಸಿ ತೆರೆದುಕೊಂಡಿದೆ. ನಗರದ ನೆಮ್ಮದಿ ಆವರಣ ಈಗ ಸಾಹಿತ್ಯ ಕಾಶಿಯಾಗಿ ಪರಿಣಮಿಸಿದೆ.
ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯಕ ಮಂಗಳವಾರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿ ಮನುಜ ತನ್ನಲ್ಲಿರುವ ಮೃಗತ್ವವನ್ನು ಕೊಂದುಕೊಂಡಾಗ ಮನುಷ್ಯತ್ವ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಪ್ರತಿ ವ್ಯಕ್ತಿಯೂ ಸ್ವಾಭಿಮಾನ ಮತ್ತು ಗೌರವದಿಂದ ಬದುಕುವ ವಾತಾವರಣ ನಮಗೆ ಅಗತ್ಯವಿದೆ ಎಂದರು. ಒಂದು ಗೃಹಿಣಿ ದಾರಿ ತಪ್ಪಿದರೆ ಮನೆಯೇ ಹಾಳಾಗುತ್ತದೆ. ಅದರಂತೆ ಆಡಳಿತದ ಜವಾಬ್ದಾರಿ ಹೊತ್ತ ಕೈಗಳು ದಾರಿ ತಪ್ಪಿದರೆ ದೇಶ ಹಾಳಾಗುತ್ತದೆ.
ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯಂತ ನಾಯಕರು ಎಂದಿಗೂ ಅಧಿಕಾರದಲ್ಲಿದ್ದಾಗೆ ತಮ್ಮ ಆಸ್ತಿ ಪಾಸ್ತಿಗಾಗಿ ಚಿಂತಿಸಲಿಲ್ಲ. ಬದಲಾಗಿ ನಾಡನ್ನು ಹೇಗೆ ಕಟ್ಟಬೇಕು, ಹೇಗೆ ಸಮೃದ್ಧಿಗೊಳಿಸಬೇಕು ಎಂದು ಚಿಂತಿಸುತ್ತಿದ್ದರು.ರಾಜಕೀಯ ಕ್ಷೇತ್ರ ಪವಿತ್ರ. ಈ ಕ್ಷೇತ್ರದಲ್ಲಿ ಇರುವವರು ನಾವು ಸಮಾಜದ, ಜನಸಾಮಾನ್ಯನ ಸೇವಕರು ಎಂದು ತಿಳಿದು ಕೆಲಸ ಮಾಡಬೇಕೇ ಹೊರತು ತಾನೊಬ್ಬ ರಾಜ ಎಂದು ತಿಳಿಯಬಾರದು.
ಬ್ರಿಟೀಷರು ಭಾರತ ಬಿಟ್ಟು ಇಷ್ಟು ವರ್ಷಗಳು ಸಂದಿದ್ದರೂ ನಾವಿನ್ನೂ ಗುಲಾಮಗಿರಿಯ ಮನೋಸ್ಥಿತಿಯಲ್ಲೇ ಇದ್ದೇವೆ ಎಂದ ಅವರು, ಸಮರ್ಥ ಕೈಗಳಿಗೆ ಆಡಳಿತ ಸಿಕ್ಕರೆ ರಾಜ್ಯ, ರಾಷ್ಟ್ರ ಅಭಿವೃದ್ಧಿಯಾಗುತ್ತದೆ. ಬಸವಣ್ಣ ಅನ್ನಕ್ಕೆ ಪ್ರಸಾದದ ಸ್ಥಾನ ನೀಡಿದ್ದಾರೆ. ಅನ್ನ ಬೆಳೆಯುವ ರೈತನಿಗೆ ಕುವೆಂಪು ಯೋಗಿಯ ಸ್ಥಾನ ನೀಡಿದ್ದರು. ರೈತನ ಬದುಕನ್ನು ಹಸನಾಗಿಸುವ ಕಾರ್ಯ ಆಗಬೇಕಿದೆ ಎಂದರು.
ಕನ್ನಡ ಭಾಷೆ ನಮ್ಮದು, ಕನ್ನಡ ಮನೆ ನಮ್ಮದು. ಕನ್ನಡದ ಈ ನಾಡನ್ನು ನಾವೆಲ್ಲ ಮನೆ ಎಂದು ಪರಿಗಣಿಸಿಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕನ್ನಡ ನಾಡು ಕಟ್ಟಿಕೊಳ್ಳಲೂ ಹೋರಾಟ ನಡೆದಿವೆ. ಕನ್ನಡ ನೆಲ ನಮ್ಮನ್ನು ಕಾಪಾಡುವ ನಾಡು ಬೇಕು ಎಂದು ಹೋರಾಟ ನಡೆಸಿದ್ದೇವೆ.
ಕನ್ನಡ ಉಳಿಸಿಕೊಳ್ಳುವ ಜವಾಬ್ದಾರಿ ಹೊರಲು ನಮ್ಮ ಕೈಗಳಿಗೆ ಶಕ್ತಿ ಬೇಕಿದೆ. ಪ್ರಜಾ ತಂತ್ರ ವ್ಯವಸ್ಥೆಯಲ್ಲಿ ನಮ್ಮ ಶಾಸಕರು, ಸಂಸದರೇ ನಮ್ಮ ನೆಲ ಜಲ ಉಳಿಸಿಕೊಳ್ಳುವ ಅಸ್ತçಗಳಾಗಿವೆ. ಹೋರಾಟಕ್ಕಾಗಿ ನಾವು ಅವರಿಗೆ ನೀಡಿದ ಅಸ್ತ್ರವನ್ನು ಶಾಸಕರು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಇಂದಿನ ದಿನ ನಾವೇನು ಮಾಡುತ್ತೇವೆಯೋ ಅದು ಮುಂದಿನವರಿಗೆ ಚರಿತ್ರೆ ಆಗಲಿದೆ. ನಾವು ಸಾಗಲು ಸೂಕ್ತ ದಾರಿ ಯಾವುದು ಎಂಬುದನ್ನು ಅರಿತು ಮುನ್ನಡೆದರೆ ನಮ್ಮ ಮುಂದಿನ ತಲೆಮಾರು ಸಹ ಅದೇ ದಾರಿಯಲ್ಲಿ ಬರಲಿದೆ. ನಾವು ನಮ್ಮ ನಡತೆಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂದು ನಾವೇ ತೀರ್ಮಾನ ಮಾಡಬೇಕು.
ವಜ್ರದ ಬೆಂಡೋಲೆ ಹಾಕಿಕೊಂಡ ಮಾತ್ರಕ್ಕೆ ಕಿವುಡುತನ ಮಾಯವಾಗುವುದಿಲ್ಲ. ಅದೇ ರೀತಿ ಸಮಾಜದಲ್ಲಿ ತಪ್ಪು ಕಾರ್ಯ ಮಾಡುವವರಿಗೆ ಭಯ, ಉತ್ತಮ ಕಾರ್ಯ ಮಾಡುವವರಿಗೆ ಎಂದಿಗೂ ಧೈರ್ಯ ಇರುತ್ತದೆ. ಸಮಾಜಕ್ಕೆ ಪೂರಕ ತತ್ವವನ್ನು ನಾವು ಅಳವಡಿಸಿಕೊಳ್ಳಬೇಕಿದೆ.
ಈ ಎಲ್ಲದರ ಕುರಿತು ಈ ಎರಡು ದಿನಗಳ ಸಾಹಿತ್ಯ ಸಮ್ಮೇಳದಲ್ಲಿ ಚಿಂತನೆ ಆಗಬೇಕಿದೆ. ಪರಿಸರವನ್ನು ದೇವತೆ ಎಂದು ಅರಿತು ರಕ್ಷಿಸಿದರೆ ಅದು ಮುಂದೆ ನಮ್ಮನ್ನು ರಕ್ಷಿಸುತ್ತದೆ. ಒಗ್ಗಟ್ಟು, ಶಿಸ್ತು, ಸಹೋದರ ಪ್ರೀತಿ ಇದ್ದರೆ ಎಲ್ಲವೂ ಯಶಸ್ವಿಯಾಗುತ್ತದೆ ಎಂದರು.
ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಸಾಹಿತ್ಯದ ಗಟ್ಟಿತನ ಹೊಂದಿದ ಜಿಲ್ಲೆ. ಕನ್ನಡಿಗರ ಮೊದಲ ರಾಜಧಾನಿ ಬನವಾಸಿ ಸಹ ಇದೇ ನೆಲದಲ್ಲಿದ್ದು, ಆದಿ ಕವಿ ಪಂಪ ಮರಿದುಂಬಿಯಾಗಿಯಾದರೂ ಇಲ್ಲೇ ಹುಟ್ಟುತ್ತೇನೆ ಎಂದು ಬಣ್ಣಿಸಿರುವ ನಾಡು ಇದು.
ಜಿಲ್ಲೆಯಲ್ಲಿ ಜನಿಸಿದ ಡಾ. ದಿನಕರ ದೇಸಾಯಿ, ಜಯಂತ ಕಾಯ್ಕಿಣಿ, ವಿಷ್ಣು ನಾಯ್ಕ, ಶಾಂತಾರಾಮ ನಾಯಕ ಅವರಂತವರು ನಾಡಿನ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಪ್ರಬಲಗೊಳಿಸಿದ್ದಾರೆ. ಭಾಷೆ ಭಾಷಿಕರ ಮಧ್ಯೆ ವೈಮನ್ಯಸಗಳು ಎಲ್ಲೆಡೆ ನಾವು ಕಾಣುತ್ತೇವೆ. ಆದರೆ, ಕನ್ನಡಿಗರ ಸ್ವಭಾವ ಮಧುರವಾಗಿದೆ.
ಕನ್ನಡಿಗರಾಗಿ ನಾವು ನಮ್ಮ ಭಾಷೆ ಪ್ರೀತಿಸಿ, ಬೇರೆ ಭಾಷೆ ಗೌರವಿಸುವ ಸ್ವಭಾವ ಹೊಂದಿದ್ದೇವೆ. ಆದರೆ, ಅನ್ಯ ಭಾಷಿಕರ ಬಗ್ಗೂ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿಯೇ ಕೆಲವೆಡೆ ಕನ್ನಡ ಭಾಷೆ ನಾಪತ್ತೆ ಆಗುವ ಸ್ಥಿತಿ ಇದೆ. ಸಾಹಿತ್ಯವನ್ನು ವಾಣಿಜ್ಯಿಕವಾಗಿ ನೋಡಬಾರದು. ಶುದ್ಧ ಮನಸ್ಸಿನಿಂದ ಸಾಹಿತ್ಯ ಸೇವೆ ಮಾಡಿದರೆ ಅದು ಅಜರಾಮರವಾಗಿರುತ್ತದೆ ಎಂದರು.
Kannada Sahitya Sammelana ದಲ್ಲಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ,ರಾಜ್ಯದಲ್ಲಿ ಕನ್ನಡ ಕ್ಕೇ ಅಗ್ರಸ್ಥಾನ ನೀಡಬೇಕಾದುದು ನಮ್ಮ ಕರ್ತವ್ಯ. ನಮ್ಮ ಜಿಲ್ಲೆಯ ಪರಿಸರ ಸಾಕಷ್ಟು ವೈವಿಧ್ಯಮಯದಿಂದ ಕೂಡಿದೆ. ಸಾಹಿತ್ಯ ದ ಅಭಿರುಚಿಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಇಂತಹ ಸಾಹಿತ್ಯ ಸಮ್ಮೇಳನಗಳು Kannada Sahitya Sammelana ಸಹಕಾರಿಯಾಗಲಿದೆ.
ನಮ್ಮ ಜಿಲ್ಲೆಯ ಸಾಹಿತಿಗಳು ದೇಶದೆಲ್ಲೆಡೆ ಹೆಸರನ್ನು ಮಾಡಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡವನ್ನು ಮರೆಯುತ್ತಿದ್ದೇವೆ. ಆಂಗ್ಲ ಭಾಷೆಯನ್ನು ಬಳಸದ ಏಕೈಕ ಕಲೆ ಎಂದರೆ ಅದು ಯಕ್ಷಗಾನ. ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳು ಸಹ ಕನ್ನಡ ಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ.
ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಜಾನಪದ ಸಾಹಿತಿಗಳಿದ್ದಾರೆ. ಜಾನಪದ ಕಲಾವಿದರಿದ್ದಾರೆ ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ. ಮಕ್ಕಳಲ್ಲಿ ಕನ್ನಡದ ಕಂಪನ್ನು ಹೆಚ್ಚಿಸಬೇಕು. ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ಕಲಿಸುವಂತೆ ಆಗಬೇಕು ಎಂದರು.
Kannada Sahitya Sammelana ದಲ್ಕಲಿ ಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಪ್ರಾಸ್ತಾವಿಕ ಮಾತನಾಡಿ, 25ವರ್ಷಗಳ ನಂತರ ಶಿರಸಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಾಹಿತ್ಯ ವನ್ನು ಕಟ್ಟಿಕೊಡುವ ಮನಸ್ಸು ಶಿರಸಿಯಲ್ಲಿದೆ. ಐತಿಹಾಸಿಕ ಘಟನಾವಳಿಗಳಿಂದ ಬೆಳೆದ ಶಿರಸಿ ಹೆಮ್ಮೆಯ ವಾಣಿಜ್ಯ ನಗರವಾಗಿ ಹೊರಹೊಮ್ಮಿದೆ.
ಶಿರಸಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಕನ್ನಡ ಸಾಹಿತ್ಯ ಪರಿಷತ್ ಗೆ ಹೆಮ್ಮೆಯ ಸಂಗತಿಯಾಗಿದೆ. ಪರಿಷತ್ ಕೇವಲ ಸಾಹಿತ್ಯ ಕ್ಕೆ ಮಾತ್ರ ಸೀಮಿತ ವಾಗಿರದೇ ಜನಸಾಮಾನ್ಯರ ಪರಿಷತ್ ಆಗಬೇಕು ಎಂಬ ಉದ್ದೇಶದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಿಕ್ಷಣ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಶಿಕ್ಷಕರ ಕೊಡುಗೆ ಸಹ ಅಪಾರವಾಗಿದೆ ಎಂದರು.
Kannada Sahitya Sammelanaದ ಅಧ್ಯಕ್ಷತೆಯನ್ನು ಸಮ್ಮೇಳನದ ಸರ್ವಾಧ್ಯಕ್ಷ ಆರ್.ಡಿ.ಹೆಗಡೆ ಆಲ್ಮನೆ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಶ್ರೀಪಾದ ಶೆಟ್ಟಿ, ನಗರ ಯೋಜನಾ ಘಟಕ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ, ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ಡಿಡಿಪಿಐ ಪಿ. ಬಸವರಾಜ, ಬಿಒ ನಾಗರಾಜ ನಾಯ್ಕ, ಸಾಹಿತಿಗಳಾದ ಬಾಗೀರಥಿ ಹೆಗಡೆ, ಜಿ. ಸುಬ್ರಾಯ ಭಟ್, ಡಾ. ವೆಂಕಟೇಶ ನಾಯ್ಕ, ಡಾ. ಸುಮನ್ ಹೆಗಡೆ, ಪೌರಾಯುಕ್ತ ಕೆ. ಕಾಂತರಾಜು ಇತರರು Kannada Sahitya Sammelana ದಲ್ಲಿದ್ದರು.
.