ಡಾಲ್ಮೇಷನ್ ನಾಯಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

26-SIRSI DOG
Published on

ಶಿರಸಿ: ಯೋನಿ ಕ್ಯಾನ್ಸರ್‌ನಿಂದ ಬಳಲುತಿದ್ದ 10 ವರ್ಷದ ಡಾಲ್ಮೇಷನ್ ನಾಯಿಗೆ ನಗರದ ಟಿಎಸ್‌ಎಸ್ ಸಮರ್ಪಣಾ ಪಶು ವೈದ್ಯ ಪಿ.ಎಸ್. ಹೆಗಡೆ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆ ನಡೆಸಿ ಮರುಜನ್ಮ ನೀಡಿದ್ದಾರೆ.
ಕುಮಟಾ ವಾಲ್ಗಳ್ಳಿಯ ಗಣಪತಿ ಮಡಿವಾಳ ಎಂಬುವವರು ಸಾಕಿದ್ದ ನಾಯಿಗೆ ಯೋನಿಯಿಂದ ಗರ್ಭಕೋಶದ ಕಂಠದವರೆಗೆ ಹರಡಿದ್ದ 18 ಗಡ್ಡೆಗಳನ್ನು ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದರು. ಟಿವಿಟಿ (ಟ್ರಾನ್ಸ್ಮಿಸ್ಸಿಬಲ್ ವೆನೆರಿಯಲ್ ಟ್ಯೂಮರ್) ಎಂಬ ಲೈಂಗಿಕ ರೋಗ ಹೆಣ್ಣು ಶ್ವಾನಗಳಲ್ಲಿ ಸಾಮಾನ್ಯ. ಆದರೆ, ಡಾಲ್ಮೇಷನ್ ನಾಯಿಗೆ ಫ್ಯಾಟಿನ್ ನೆಕ್ರೋಸಿಸ್ ರೀತಿಯ ಗಡ್ಡೆ ಇಷ್ಟೊಂದು ಪ್ರಮಾಣದಲ್ಲಿ ಹರಡಿದ್ದು ಅಪರೂಪ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅತ್ಯಂತ ಜಾಗರೂಕವಾಗಿ ರಕ್ತಸ್ರಾವವಿಲ್ಲದೆ ನಡೆದ ಈ ಶಸ್ತ್ರಚಿಕಿತ್ಸೆಗೆ ನಾಗಶ್ರೀ, ಪ್ರದೀಪ ಹೆಗಡೆ ಮತ್ತು ಶ್ರೀನಿಧಿ ಹೆಗಡೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net