ಎಂಸಿಸಿ ಕ್ರಿಕೆಟ್ ಟ್ರೋಫಿ-ಲಯನ್ಸ್‌ ತಂಡ ಚಾಂಪಿಯನ್‌

cricket.
Published on

ಶಿರಸಿ:ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಮಾರ್ನಿಗ್ ಕ್ರಿಕೆಟ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಎಂಸಿಸಿ ದ್ವಿ-ದಶಮಾನೋತ್ಸವ ಟ್ರೋಫಿಯಲ್ಲಿ ಎಂಸಿಸಿ ಲಯನ್ಸ್ ತಂಡ ಜಯಗಳಿಸಿತು.

ಟೆನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಎಂಸಿಸಿ ಟೈಗರ್ ರನ್ನರ್‌ ಅಪ್‌, ಎಂಸಿಸಿ ಜಾಗ್ವಾರ್ ತಂಡ ತೃತೀಯ ಸ್ಥಾನಗಳಿಸಿತು. ಟ್ರೋಫಿ ವಿತರಿಸಿ ಮಾತನಾಡಿದ ಶಿರಸಿ ಸಿಪಿಐ ರಾಮಚಂದ್ರ ನಾಯಕ, ದಿನನಿತ್ಯದ ಜಂಜಾಟದ ನಡುವೆ ಕ್ರೀಡೆ ಮನಸ್ಸಿಗೆ ಹಾಗೂ ದೇಹಕ್ಕೆ ನೆಮ್ಮದಿಯನ್ನು ನೀಡುತ್ತದೆ.‌ ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಪಾಲ್ಗೊಂಡಿದ್ದೇವೆ ಎಂಬ ಹಮ್ಮೆ ನಮಗಿರಬೇಕು. ಆಟಗಾರರಿಗೆ ತರಬೇತಿ ನೀಡುತ್ತಿರುವ ಈ ಸಂಸ್ಥೆ ಇನ್ನು ಬೆಳಗಲಿ ಎಂದರು.

ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಜಾನನ ಭಟ್‌, ಹೆಸ್ಕಾಂ ಸಹಾಯಕ ಇಂಜಿನಿಯರ್‌ ನಾಗರಾಜ ಪಾಟೀಲ, ನಗರ ಠಾಣೆಯ ಪಿಎಸ್ಐ ರಾಜಕುಮಾರ ಉಕ್ಕಲಿ, ತಾಲೂಕಾ ಕ್ರೀಡಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವ್ಯವಸ್ಥಾಪಕ ಎಸ್.ಐ.ನಾಯ್ಕ, ತಾಲೂಕಾ ಕ್ರೀಡಾಧಿಕಾರಿ ಕಿರಣ ನಾಯ್ಕ ಇದ್ದರು.

ಭಾನುಪ್ರಕಾಶ ಪಂದ್ಯ ಪುರುಷೋತ್ತಮ, ಆದರ್ಶ ಬೆಸ್ಟ್ ಫಿಲ್ಡರ್, ಪ್ರಶಾಂತ.ಎಸ್.ಎಚ್,, ಬೆಸ್ಟ್ ಬೌಲರ್‌, ಭಾನುಪ್ರಕಾಶ ಬೆಸ್ಟ್ ಬ್ಯಾಟ್ಸ್‌ಮನ್‌ ಟ್ರೋಫಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net