ಸಿರಗುಪ್ಪ ನಗರಸಭೆ ಮಾಜಿ ಸದಸ್ಯನ ಮನೆಯಲ್ಲಿ ಕಳ್ಳತನ, 34 ತೊಲ ಚಿನ್ನಾಭರಣ, 2.50 ಲಕ್ಷ ರೂ. ದೋಚಿ ಪರಾರಿ

Gold Theft
Published on

ಸಿರಗುಪ್ಪ: ನಗರದ 11ನೇ ವಾರ್ಡ್ ಜಾಮೀಯಾ ಮಸೀದಿ ಬಳಿ ಇರುವ ನಗರಸಭೆ ಮಾಜಿ ಸದಸ್ಯ ರಹಮತ್ ವುಲ್ಲಾ ಮನೆಯಲ್ಲಿ ಕಳ್ಳತನವಾಗಿದೆ. 2.50 ಲಕ್ಷ ನಗದು ಹಾಗೂ 34.5 ತೊಲ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಬಳ್ಳಾರಿಯಲ್ಲಿರುವ ಮಗನನ್ನು ಮಾತನಾಡಿಸಲು ಬು ಧವಾರ ಬೆಳಗ್ಗೆ ಹೋಗಿ ರಾತ್ರಿ 8ಗಂಟೆಗೆ ಬಂದು ನೋಡಿದಾಗ ಮನೆ ಬೀಗ ಮುರಿದು ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿಎಸ್‌ಪಿ ಅರುಣ್‌ಕುಮಾರ್ ಕೋಳೂರು, ಪಿಎಸ್‌ಐ ಗಂಗಪ್ಪ ಬುರ್ಲಿ, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net