ಸಿರಗುಪ್ಪ ತಾಲೂಕಿನ ಕೂರಿಗನೂರು ಡಿಸ್ಟ್ರಿಬ್ಯೂಟರ್‌ಗೆ ಹರಿಯಿತು ನೀರು: ರೈತರು ಹರ್ಷ

101020 Kuriganuru Distrubuter Canal
ಸಿರಗುಪ್ಪ ತಾಲೂಕಿನ ಕೂರಿಗನೂರು ಡಿಸ್ಟ್ರಿಬ್ಯೂಟರ್‌ಗೆ ಶನಿವಾರ ನೀರು ಹರಿಸಿರುವುದು.
Published on

ಬಳ್ಳಾರಿ: ಸಿರಗುಪ್ಪ ತಾಲೂಕಿನ ತುಂಗಭದ್ರಾ ಕೆಳಮಟ್ಟದ ನಾಲೆಯ ಕೂರಿಗನೂರು ಡಿಸ್ಟ್ರಿಬ್ಯೂಟರ್‌ಗೆ ಶನಿವಾರ ನೀರು ಹರಿಸಲಾಗಿದೆ.

ನೀರು ಹರಿಯದ ಕುರಿತು ಅ.10ರಂದು ವಿಜಯವಾಣಿ ‘ಭತ್ತದ ಕಣಜದಲ್ಲಿ ಕೃತಕ ಬರಗಾಲ’ ಎಂಬ ಶೀರ್ಷಿಕೆಯಡಿ ಸಹಾಯವಾಣಿ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ನೀರು ಹರಿಸಲು ಕ್ರಮಕೈಗೊಂಡಿದ್ದಾರೆ. ನಾಲೆಯಲ್ಲಿ ನೀರು ಬಂದಿದ್ದಕ್ಕೆ ಉತ್ತನೂರು ಗ್ರಾಮದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಫಸಲು ಕೈಗೆ ಬರುವ ಹಂತದಲ್ಲಿ ನಾಲೆಗೆ ನೀರು ಬಿಡದಿರುವುದು ಆತಂಕಕ್ಕೆ ಕಾರಣವಾಗಿತ್ತು. ವಿಜಯವಾಣಿ ಸಹಾಯವಾಣಿಯಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ರೈತ ಬಂಗಾರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net